ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೆಜ್ ಪ್ರದೇಶಕ್ಕೆ ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರೆಜ್ ಪ್ರದೇಶದ ಜನರು ಇದುವರೆಗೂ ವಿದ್ಯುತ್ಗಾಗಿ ಡಿಸೇಲ್ ಜನರೇಟರ್ ಬಳಸುತ್ತಿದ್ದರು.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಕಾಶ್ಮೀರ ವಿದ್ಯುತ್ ವಿತರಣಾ ನಿಗಮ ನಿಯಮಿತ (ಕೆಪಿಡಿಸಿಎಲ್) ಪೋಸ್ಟ್ ಹಂಚಿಕೊಂಡಿದೆ.

ಸವಾಲಿನ ಭೂ ಪ್ರದೇಶಲ್ಲಿ ವಿದ್ಯುತ್ಗಾಗಿ ಡಿಸೇಲ್ ಜನರೇಟರ್ಗಳ ಅವಲಂಬಿತವಾಗಿದ್ದ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿರುವುದು ಒಂದು ಮೈಲುಗಲ್ಲು ಹಾಗೂ ಈ ವಿಷಯವನ್ನು ಹಂಚಿಕೊಳ್ಳಲು ಸಂತೋಷವಾಗಿದೆ ಎಂದು ಹೇಳಿದೆ.

ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮಾತನಾಡಿ, ವಿದ್ಯುತ್ಗಾಗಿ ತೊಂದರೆ ಎದುರಿಸುತ್ತಿದ್ದ ಗುರೆಜ್ ಪ್ರದೇಶವು ಇಂದು ವಿದ್ಯುತ್ ಸಂಪರ್ಕ ಪಡೆದಿದೆ. ಈ ಮೂಲಕ ವಿವಿಧ ಪಂಚಾಯತ್ಗಳ ಸುಮಾರು 1,500 ಗ್ರಾಹಕರಿಗೆ ಇದರಿಂದ ಪ್ರಯೋಜನವಾಗಲಿದೆ. ಇದೊಂದು ಐತಿಹಾಸಿಕ ಮೈಲುಗಲ್ಲು ಎಂದು ಭಾನುವಾರ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.