ಶ್ರೀನಗರ: ಕಾಶ್ಮೀರದ ಗುಡ್ಡಗಾಡು ಪ್ರದೇಶಗಳ ಪರಿಚಯವಿದ್ದ, ಸುಮಾರು 100 ಮಂದಿ ನುಸುಳುಕೋರರಿಗೆ ಸಹಕಾರ ನೀಡಿ, ಕಳೆದ 30 ವರ್ಷಗಳಿಂದ ಇಲ್ಲಿ ಸಕ್ರಿಯವಾಗಿದ್ದ ಬಾಗು ಖಾನ್ ಎಂಬ ಉಗ್ರರ ಕಮಾಂಡರ್ನನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಇದು ಭದ್ರತಾ ಪಡೆಗಳಿಗೆ ದೊರೆತ ಬಹುದೊಡ್ಡ ಯಶಸ್ಸಾಗಿದೆ.

ಬಾಗು ಖಾನ್ನನ್ನು ‘ಮಾನವ ಜಿಪಿಎಸ್’ ಎಂದೇ ಕರೆಯಲಾಗುತ್ತಿತ್ತು. ಎಲ್ಒಸಿ ಬಳಿಯ ನೌಶೋರ್ ನಾರ್ ಎಂಬಲ್ಲಿ ಭದ್ರತಾ ಪಡೆಗಳು ‘ಆಪರೇಷನ್ ನೌಶೋರ್ ನಾರ್ 4’ ಕಾರ್ಯಾಚರಣೆಯನ್ನು ಕಳೆದ ವಾರ ನಡೆಸಿದ್ದವು. ಈ ವೇಳೆ ಖಾನ್ ಸೇರಿದಂತೆ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ.

‘ಬಾಗು ಖಾನ್, ಹಿಜ್ಬುಲ್ ಮುಜಾಯಿದ್ದೀನ್ ಉಗ್ರ ಸಂಘಟನೆಗೆ ಸೇರಿದವನಾಗಿದ್ದ. ಆದರೆ, ಬೇರೆ ಉಗ್ರ ಸಂಘಟನೆಗಳಿಗೂ ಸಹಕಾರ ನೀಡುತ್ತಿದ್ದ. ಭಾರಿ ಶಸ್ತ್ರಗಳಿದ್ದ ಉಗ್ರರು ನೌಶೋರ್ ನಾರ್ ಪ್ರದೇಶದಲ್ಲಿ ದೇಶದ ಒಳಗೆ ನುಸುಳಲು ಯತ್ನಿಸಿದರು. ಈ ವೇಳೆ ಉಗ್ರರು ಹಾಗೂ ಭದ್ರತಾ ಪಡೆಗಳ ಮಧ್ಯೆ ಗುಂಡಿನ ಚಕಮಕಿ ನಡೆಯಿತು. ಈ ವೇಳೆ ಇಬ್ಬರು ಉಗ್ರರು ಮೃತಪಟ್ಟರು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.