ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರೂಪ್ ಬಿ, ಸಿ ಸರ್ಕಾರಿ ನೌಕರರಿಗೆ ತಲಾ ₹7 ಸಾವಿರ ಬೋನಸ್‌ ಘೋಷಿಸಿದ ದೆಹಲಿ ಸಿಎಂ

ಗ್ರೂಪ್ ಬಿ ನಾನ್ ಗೆಜೆಟೆಡ್, ಗ್ರೂಪ್ ಸಿ ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ನೀಡಿದ ಸಿಎಂ ಕೇಜ್ರಿವಾಲ್.
Published 6 ನವೆಂಬರ್ 2023, 13:54 IST
Last Updated 6 ನವೆಂಬರ್ 2023, 13:54 IST
ಅಕ್ಷರ ಗಾತ್ರ

ನವದೆಹಲಿ: ದೀಪಾವಳಿ ಹಬ್ಬಕ್ಕೂ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರಿ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ರಾಜ್ಯದ ಎಲ್ಲಾ ಗ್ರೂಪ್ ಬಿ ನಾನ್ ಗೆಜೆಟೆಡ್ ಮತ್ತು ಗ್ರೂಪ್ ಸಿ ನೌಕರರಿಗೆ ಇಂದು(ಸೋಮವಾರ) ತಲಾ ₹7 ಸಾವಿರ ಬೋನಸ್ ಘೋಷಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, 'ದೆಹಲಿ ಸರ್ಕಾರದಲ್ಲಿ ಕೆಲಸ ಮಾಡುವ ಎಲ್ಲಾ ಉದ್ಯೋಗಿಗಳು ನಮ್ಮ ಕುಟುಂಬದಂತೆಯೇ ಇದ್ದಾರೆ. ಇಂದು ನಾನು ಅವರಿಗೆ ಖುಷಿಯ ಸುದ್ದಿಯನ್ನು ನೀಡುತ್ತಿದ್ದೇನೆ. ಇದು ಹಬ್ಬಗಳ ತಿಂಗಳು. ಈ ಸಮಯದಲ್ಲಿ 80 ಸಾವಿರ ಗ್ರೂಪ್ ಬಿ ಮತ್ತು ಗ್ರೂಪ್ ಸಿ ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ನೀಡಲು ಸರ್ಕಾರ ನಿರ್ಧರಿಸಿದೆ. ಇದರ ಒಟ್ಟು ಮೊತ್ತ ₹56 ಕೋಟಿ' ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT