ನವದೆಹಲಿ: ತಿಹಾರ್ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ವೈದ್ಯಕೀಯ ಜಾಮೀನು ಪಡೆಯುವ ಉದ್ದೇಶದಿಂದಾಗಿ ಟೈಪ್–2 ಡಯಾಬಿಟಿಸ್ ಹೊಂದಿದ್ದರೂ ಪ್ರತಿದಿನ ಸಕ್ಕರೆ ಅಂಶವಿರುವ ಮಾವಿನಹಣ್ಣು, ಆಲೂ ಪೂರಿ ಹಾಗೂ ಸಿಹಿ ತಿಂಡಿಗಳನ್ನು ಸೇವಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ( ಇ.ಡಿ ) ಗುರುವಾರ ನ್ಯಾಯಾಲಯಕ್ಕೆ ತಿಳಿಸಿದೆ.
.ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್ ನ್ಯಾಯಾಂಗ ಬಂಧನದ ಅವಧಿ ವಿಸ್ತರಿಸಿದ ಕೋರ್ಟ್.ವಿಶ್ಲೇಷಣೆ | ಕೇಜ್ರಿವಾಲ್ ಬಂಧನ: ಪ್ರಶ್ನೆ ಹಲವು.
ಇಡಿ ಹಾಗೂ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರ ಎದುರು ಇ.ಡಿ ವಾದ ಮಂಡಿಸಿದೆ.

ಈ ವೇಳೆ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಕೇಜ್ರಿವಾಲ್ ಅವರ ಡಯಟ್ ಚಾರ್ಟ್ ಸೇರಿದಂತೆ ಇತರೆ ಅಂಶಗಳ ವರದಿಯನ್ನು ಸಲ್ಲಿಸುವಂತೆ ತಿಹಾರ್ ಜೈಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
.ಸಂಪಾದಕೀಯ: ಕೇಜ್ರಿವಾಲ್ ಬಂಧನ; ಕೆಟ್ಟ ಬಗೆಯ ದ್ವೇಷ ರಾಜಕಾರಣ.
ಶುಗರ್ ಲೆವೆಲ್ ಏರುಪೇರಾಗುತ್ತಿರುವ ಕಾರಣ ತಮ್ಮ ಆಪ್ತ ವೈದ್ಯರನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಸಂಪರ್ಕಿಸಲು ಅನುಮತಿ ಕೋರಿ ಕೇಜ್ರಿವಾಲ್ ನ್ಯಾಯಾಲಯದ ಮೊರೆ ಹೋಗಿದ್ದಾರೆ.
.ಕೇಜ್ರಿವಾಲ್ ಬಂಧನ: ಜನರ ಬೆಂಬಲ ಪಡೆಯಲು ಎಎಪಿಯಿಂದ 200 ‘ಸಂಕಲ್ಪ ಸಭೆ’.ಅಬಕಾರಿ ನೀತಿ ಹಗರಣ: ಬಂಧನ ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿದ ಅರ್ಜಿ ತಿರಸ್ಕೃತ .
ನಾಳೆಯೊಳಗೆ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನ್ಯಾಯಾಧೀಶರು ಸೂಚಿಸಿದ್ದು, ನ್ಯಾಯಾಲಯವು ಮತ್ತೆ ವಿಚಾರಣೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ದೆಹಲಿ ಸರ್ಕಾರದ ಅಬಕಾರಿ ನೀತಿ ಹಗರಣದಲ್ಲಿನ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಇಲ್ಲಿನ ನ್ಯಾಯಾಲಯವು ಏಪ್ರಿಲ್ 23ರ ವರೆಗೆ ವಿಸ್ತರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.