ತಿರುವನಂತಪುರ: ಕ್ರಿಸ್ಮಸ್ ಹಬ್ಬದ ಮೊದಲ ನಾಲ್ಕು ದಿನಗಳಲ್ಲಿ ಕೇರಳ ರಾಜ್ಯ ಪಾನೀಯ ನಿಗಮವು (ಕೆಎಸ್ಬಿಸಿ) ತನ್ನ ‘ಬಿಇವಿಸಿಒ‘ ಮಳಿಗೆಗಳ ಮೂಲಕ ₹332.62 ಕೋಟಿ ಮೌಲ್ಯದ ಮದ್ಯ ಮಾರಾಟ ಮಾಡಿದೆ.

ಕೇರಳದಲ್ಲಿ ಡಿಸೆಂಬರ್22ರಿಂದ ಕ್ರಿಸ್ಮಸ್ ಕಲರವ. ಈ ನಾಲ್ಕು ದಿನದ ಅವಧಿಯಲ್ಲಿ ದಾಖಲೆಯ ಮದ್ಯ ಮಾರಾಟವಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡ 18.99ರಷ್ಟು ಹೆಚ್ಚಳವಾಗಿದೆ. ಹಿಂದಿನ ವರ್ಷ ₹229.54 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿತ್ತು ಎಂದು ಕೆಎಸ್ಬಿಸಿಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಡಿಸೆಂಬರ್ 24ರಂದು ₹114.45 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ. ಡಿಸೆಂಬರ್ 22ರಂದು ₹77.62 ಕೋಟಿ, 23ರಂದು ₹81.34 ಕೋಟಿ, 25ರಂದು ₹59.21 ಕೋಟಿ ಮೊತ್ತದ ಮದ್ಯ ಮಾರಾಟವಾಗಿದೆ. ಡಿ.22ರಿಂದ 31ರವರೆಗಿನ ಅವಧಿಯನ್ನು ಕ್ರಿಸ್ಮಸ್– ಹೊಸ ವರ್ಷದ ಋತುವೆಂದು ಕೆಎಸ್ಬಿಸಿ ಪರಿಗಣಿಸಿದ್ದು, ವಹಿವಾಟು ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ವರ್ಷದ ಓಣಂ ಹಬ್ಬದ ಸಮಯದಲ್ಲಿ ₹970.74 ಕೋಟಿ ಮದ್ಯದ ವಹಿವಾಟು ನಡೆದಿತ್ತು ಎಂದು ಕೆಎಸ್ಬಿಸಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.