ಕೊಚ್ಚಿ: 2015ರ ಡ್ರಗ್ಸ್ ಪ್ರಕರಣದಲ್ಲಿ ಆರೋಪಿಗಳಾಗಿದ್ದ ನಟ ಶೈನ್ ಟಾಮ್ ಚಾಕೊ ಮತ್ತು ಇತರ ಆರು ಜನರನ್ನು ಖುಲಾಸೆಗೊಳಿಸಿ ಕೇರಳ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.

ಎರ್ನಾಕುಲಂ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಸುಲೇಖಾ ಎಂ ಅವರು, ಈ ಪ್ರಕರಣದಲ್ಲಿ ನಟ ಶೈನ್ ಮತ್ತು ನಾಲ್ವರು ಮಹಿಳೆಯರಾದ ರೇಷ್ಮಾ ರಂಗಸ್ವಾಮಿ, ಸಹಾಯಕ ನಿರ್ದೇಶಕಿ ಬ್ಲೆಸ್ಸಿ ಸಿಲ್ವೆಸ್ಟರ್, ಟಿನ್ಸಿ ಬಾಬು ಮತ್ತು ಸ್ನೇಹಾ ಬಾಬು ಅವರನ್ನು ಖುಲಾಸೆಗೊಳಿಸಿದರು. ಅವರಲ್ಲದೆ, ನೈಜೀರಿಯಾದ ಪ್ರಜೆ ಒಕೋವ್ ಚಿಗೋಜಿ ಕಾಲಿನ್ಸ್ ಮತ್ತು ತಮಿಳುನಾಡು ಮೂಲದ ಪೃಥ್ವಿ ರಾಜ್ ಅವರನ್ನು ಸಹ ನ್ಯಾಯಾಲಯ ಖುಲಾಸೆಗೊಳಿಸಿದೆ.

ಆರೋಪಿಗಳ ವಿರುದ್ಧ ಎನ್ಡಿಪಿಎಸ್ (ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ) ಅಡಿ ಪ್ರಕರಣ ದಾಖಲಿಸಲಾಗಿತ್ತು.

A1 ರಿಂದ A7 ಆರೋಪಿಗಳು (ಚಾಕೊ ಮತ್ತು ಇತರರು) ಎನ್ಡಿಪಿಎಸ್ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧಗಳಲ್ಲಿ ತಪ್ಪಿತಸ್ಥರಲ್ಲ ಎಂದು ಸಾಬೀತಾಗಿದ್ದು, ಅವರನ್ನು ಖುಲಾಸೆಗೊಳಿಸಲಾಗಿದೆ ಎಂದು ನ್ಯಾಯಾಲಯವು ತನ್ನ ಸಂಕ್ಷಿಪ್ತ ಆದೇಶದಲ್ಲಿ ತಿಳಿಸಿದೆ.

2015ರ ಜನವರಿ 31ರಂದು ಕಡವಂತ್ರದಲ್ಲಿರುವ ಐಷಾರಾಮಿ ಫ್ಲಾಟ್ನಲ್ಲಿ ಕೊಕೇನ್ ಪತ್ತೆಯಾಗಿತ್ತು. ಪ್ರಕರಣ ಸಂಬಂಧ ನಟ ಚಾಕೊ ಸೇರಿದಂತೆ ಐವರನ್ನು ಬಂಧಿಸಲಾಗಿತ್ತು.
.Drug Case | ಅಮೃತ್ಪಾಲ್ ಸಿಂಗ್ ಸಹೋದರನ ಬಂಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.