ಇಡುಕ್ಕಿ, ಕೇರಳ: ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕ ಕುಟುಂಬದ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಮೂವರು ಅಪರಾಧಿಗಳಿಗೆ ಕೇರಳದ ನ್ಯಾಯಾಲಯ 90 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ದೇವಿಕುಳಂ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪಿ.ಎ.ಸಿರಾಜುದ್ದೀನ್ ಅವರು ಐಪಿಸಿ ಮತ್ತು ಪೋಕ್ಸೊ ಕಾಯ್ದೆಯಡಿ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ಪ್ರಕಟಿಸಿದರು.

ಮೂವರ ವಿರುದ್ಧ ಐಪಿಸಿಯ ಎರಡು ಸೆಕ್ಷನ್‌ಗಳಡಿ ಕ್ರಮವಾಗಿ 20 ಮತ್ತು 25 ವರ್ಷ, ಪೋಕ್ಸೊ ಕಾಯ್ದೆಯ ಎರಡು ಸೆಕ್ಷನ್‌ಗಳಡಿ ಕ್ರಮವಾಗಿ 20 ಹಾಗೂ 25 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

‘ಆದರೆ, ಜೈಲು ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಲಿರುವ ಕಾರಣ ಮತ್ತು ಅಪರಾಧಿಗಳಿಗೆ ವಿಧಿಸಿರುವ ಗರಿಷ್ಠ ಜೈಲು ಶಿಕ್ಷೆ 25 ವರ್ಷಗಳು ಆಗಿರುವುದರಿಂದ ಅವರು 25 ವರ್ಷ ಜೈಲಿನಲ್ಲಿರಬೇಕಾಗುತ್ತದೆ’ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸ್ಮಿಜು ಕೆ.ದಾಸ್ ಹೇಳಿದ್ದಾರೆ.

ಇಡುಕ್ಕಿ ಜಿಲ್ಲೆಯ ಪೂಪಾರ ಗ್ರಾಮದ ಚಹಾ ತೋಟದಲ್ಲಿ 2022ರ ಮೇ 29 ರಂದು 15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.