ತಿರುವನಂತಪುರ: ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರೊಬ್ಬರು ಕೇರಳದಲ್ಲಿ ಇದೇ ಮೊದಲ ಬಾರಿಗೆ ಎಂಬಿಬಿಎಸ್ ಪೂರೈಸಿ ವೈದ್ಯರಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಕೇರಳದಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರ ಉಪಸ್ಥಿತಿ ಇದ್ದಂತಾಗಿದೆ.

ಪಾಲಕ್ಕಾಡ್ ನಿವಾಸಿ, 26 ವರ್ಷ ವಯಸ್ಸಿನ ವಿಭಾ ಉಷಾ ರಾಧಾಕೃಷ್ಣನ್ ವೈದ್ಯರಾಗಿರುವ, ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿ. ಕೋಯಿಕ್ಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪೂರೈಸಿರುವ ಅವರು, ವೈದ್ಯರಾಗಿ ಸೇವೆ ಆರಂಭಿಸಿದ್ದಾರೆ.

ಲೈಂಗಿಕ ಅಲ್ಪಸಂಖ್ಯಾತರಾಗಿ ಗುರುತಿಸಿಕೊಳ್ಳುವ ಜೊತೆಗೆ, ವೈದ್ಯ ಶಿಕ್ಷಣ ಪೂರೈಸಲು ಡಾ. ವಿಭಾ ಅವರಿಗೆ ಕುಟುಂಬ ಸದಸ್ಯರಿಂದ ಪೂರ್ಣ ಬೆಂಬಲ ವ್ಯಕ್ತವಾಗಿದೆ. ತನ್ನ 20ನೇ ವಯಸ್ಸಿನವರೆಗೂ ಇವರು ವಿಪಿನ್ ಎಂದೇ ಸಮಾಜದಲ್ಲಿ ಗುರುತಿಸಿಕೊಂಡಿದ್ದರು.

‘ಎಂಬಿಬಿಎಸ್ ಪದವಿ ಕಲಿಕೆಯ ಹಂತದಲ್ಲಿದ್ದಾಗಲೇ ನನ್ನೊಳಗಿನ ಸ್ತ್ರೀ ಭಾವನೆಗಳನ್ನು ಗೆಳೆಯರ ಜೊತೆ ಹಂಚಿಕೊಂಡೆ. ನಂತರ ನನ್ನ ತಾಯಿ, ಶಿಕ್ಷಕಿಯೂ ಆದ ಉಷಾಗೆ ತಿಳಿಸಿದೆ. ಆರಂಭದಲ್ಲಿ ಬೇಸರಿಸಿಕೊಂಡರೂ, ನಂತರದಲ್ಲಿ ನನ್ನ ಭಾವನೆಗಳನ್ನು ಅರ್ಥಮಾಡಿಕೊಂಡರು. ಆದರೆ, ಪರಿಸ್ಥಿತಿ ಅರ್ಥ ಮಾಡಿಕೊಳ್ಳಲು ತಂದೆ, ಸೇನೆಯ ನಿವೃತ್ತ ಸಿಬ್ಬಂದಿ ರಾಧಾಕೃಷ್ಣನ್ ಅವರಿಗೆ ಸಾಕಷ್ಟು ಸಮಯ ಹಿಡಿಯಿತು. ನನ್ನ ಸಹೋದರ, ಬ್ಯಾಂಕ್ ನೌಕರಿಯಲ್ಲಿರುವ ವಿಷ್ಣು ಪೂರ್ಣ ಸಹಕಾರ ನೀಡಿದ’ ಎಂದು ವಿಭಾ ಹೇಳಿದರು.

ಕುಟುಂಬದ ಸದಸ್ಯರ ಬೆಂಬಲದಿಂದಲೇ ಲಿಂಗಬದಲಾವಣೆ ಚಿಕಿತ್ಸೆಗೂ ಒಳಗಾಗಿದ್ದರು. ನಂತರ ಅಧಿಕೃತವಾಗಿ ದಾಖಲೆಗಳಲ್ಲಿಯೂ ಹೆಸರು ಮತ್ತು ಲಿಂಗವನ್ನು ಬದಲಿಸಿಕೊಂಡರು.

ಸದ್ಯ, ಖಾಸಗಿಯಾಗಿ ವೈದ್ಯ ವೃತ್ತಿ ಕೈಗೊಂಡಿರುವ ಡಾ. ವಿಭಾ, ಮನೋವಿಜ್ಞಾನ ಅಥವಾ ತುರ್ತುಚಿಕಿತ್ಸೆ ಕ್ಷೇತ್ರದಲ್ಲಿ ವಿದೇಶದಲ್ಲಿ ಉನ್ನತ ವ್ಯಾಸಂಗ ಮುಂದುವರಿಸುವ ಆಶಯವನ್ನು ಹೊಂದಿದ್ದಾರೆ.

ಕೇರಳದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರು ಆಯುರ್ವೇದ ವೈದ್ಯರು, ವಕೀಲರು ಮತ್ತು ಪೈಲಟ್‌ಗಳಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.