ತಿರುವನಂತಪುರ: ಕಳೆದ ವರ್ಷ ಕೇರಳದ ವಯನಾಡು ಜಿಲ್ಲೆಯ ಮೆಪ್ಪಾಡುವಿನಲ್ಲಿ ಸಂಭವಿಸಿದ್ದ ಭೀಕರ ಭೂಕುಸಿತದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ತಲಾ ₹10 ಲಕ್ಷ ಶೈಕ್ಷಣಿಕ ನೆರವನ್ನು ರಾಜ್ಯ ಸರ್ಕಾರ ಘೋಷಿಸಿದೆ.

ಮೆಪ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಂದೆ–ತಾಯಿ ಇಬ್ಬರನ್ನೂ ಕಳೆದುಕೊಂಡ 7 ಮಕ್ಕಳು ಹಾಗೂ ಪೋಷಕರೊಬ್ಬರನ್ನು ಕಳೆದುಕೊಂಡ 14 ಮಕ್ಕಳಿಗೆ ತಲಾ ₹10 ಲಕ್ಷ ಆರ್ಥಿಕ ನೆರವನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
.ಹವಾಮಾನ ಬದಲಾವಣೆಯಿಂದ ಶೇ10ರಷ್ಟು ಹೆಚ್ಚು ಮಳೆ ವಯನಾಡು ದುರಂತಕ್ಕೆ ಕಾರಣ: ಅಧ್ಯಯನ .ಟೀಮ್ ಇಂಡಿಯಾದ ಯಶಸ್ಸು ಐಪಿಎಲ್ನಲ್ಲೂ ಮುಂದುವರಿಸಲಿದ್ದೇನೆ: ಹಾರ್ದಿಕ್ ವಿಶ್ವಾಸ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದೂ ತಿಳಿಸಿದೆ.

ಮಕ್ಕಳಿಗೆ 18 ವರ್ಷ ಪೂರ್ಣಗೊಳ್ಳುವವರೆಗೂ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂಬ ಷರತ್ತಿನ ಮೇರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಆರ್ಥಿಕ ನೆರವನ್ನು ಒದಗಿಸಲಾಗಿದೆ. ಈ ಹಿಂದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡಲಾಗಿದ್ದ ಆರ್ಥಿಕ ನೆರವಿಗೆ ಇದು ಹೆಚ್ಚುವರಿಯಾಗಿ ಸೇರ್ಪಡೆಗೊಳ್ಳುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

ಜಿಲ್ಲಾಡಳಿತದ ಖಾತೆಗೆ ಹಣವನ್ನು ಜಮೆ ಮಾಡಿ, ಅದರ ಮಾಸಿಕ ಬಡ್ಡಿಯನ್ನು ಆಯಾ ಮಕ್ಕಳನ್ನು ನೋಡಿಕೊಳ್ಳುವವರಿಗೆ ಪಾವತಿಸುವ ಕೆಲಸವನ್ನು ವಯನಾಡು ಜಿಲ್ಲಾಧಿಕಾರಿಗೆ ವಹಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ

ವಯನಾಡಿನ ಮುಂಡಕ್ಕೈ ಮತ್ತು ಚೂರಲ್ಮಲದಲ್ಲಿ ಸಂಭವಿಸಿದ ಭೂಕುಸಿತ ದುರಂತದಲ್ಲಿ ಬದುಕುಳಿದವರ ಪುನರ್ವಸತಿಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ನೀಡಲು ಕೇರಳ ಸರ್ಕಾರ ನಿರ್ಧರಿಸಿದೆ.
.ನಾಗ್ಪುರ ಹಿಂಸಾಚಾರ: ಮಹಿಳಾ ಕಾನ್ಸ್ಟೆಬಲ್ ಮೇಲೆ ಗಲಭೆಕೋರರಿಂದ ಲೈಂಗಿಕ ದೌರ್ಜನ್ಯ.ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪ: ಮರಕ್ಕೆ ಕಟ್ಟಿ ಹಾಕಿ ಮಹಿಳೆಗೆ ಹಲ್ಲೆ.ಪೊಲೀಸರಂತೆ ನಟಿಸಿ ಆಭರಣ ಲೂಟಿ: 24 ತಾಸಿನೊಳಗೆ ಮೂವರ ಬಂಧನ.ಮಹಾರಾಷ್ಟ್ರ: ಮೊಘಲ್ ದೊರೆ ಔರಂಗಜೇಬ್ ಸಮಾಧಿ ಸಮೀಪ ಡ್ರೋನ್ ಹಾರಾಟ ನಿಷೇಧ.ವಯನಾಡು ಭೂಕುಸಿತ | ಸೇನಾ ಕಾರ್ಯಕ್ಕೆ ಮೆಚ್ಚುಗೆ; ವಿದ್ಯಾರ್ಥಿಯ ಹೃದಯಸ್ಪರ್ಶಿ ಪತ್ರ.ವಯನಾಡು ಭೂಕುಸಿತ: ಮೃತರ ಸಂಖ್ಯೆ 221ಕ್ಕೆ ಏರಿಕೆ, ಇನ್ನೂ 180 ಮಂದಿ ನಾಪತ್ತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.