ತಿರುವನಂತಪುರ: ಕೇರಳದ ಆಡಳಿತಾರೂಢ ಎಲ್ಡಿಎಫ್ನ ಶಾಸಕ, ಮಾಜಿ ಸಚಿವ ಆ್ಯಂಟನಿ ರಾಜು ಅವರು ಪ್ರಕರಣವೊಂದರಲ್ಲಿ ಶಿಕ್ಷೆ ಗುರಿಯಾಗಿರುವುದರಿಂದ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.

ಆಸ್ಟ್ರೇಲಿಯಾ ಪ್ರಜೆಯೊಬ್ಬ ಭಾಗಿಯಾಗಿದ್ದ ಮಾದಕ ವಸ್ತು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ತಿರುಚಿರುವ ಅಪರಾಧ ಸಾಬೀತಾಗಿದ್ದರಿಂದ ಆ್ಯಂಟನಿ ಅವರಿಗೆ ಮೂರು ವರ್ಷ ಶಿಕ್ಷೆ ವಿಧಿಸಿರುವುದಾಗಿ ನೆಡುಮಂಗಡ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜನವರಿ 3ರಂದು ತೀರ್ಮಾನ ಪ್ರಕಟಿಸಿತ್ತು. ಈ ಪ್ರಕರಣವು ಮೂರು ದಶಕಗಳಷ್ಟು ಹಳೆಯದ್ದು.

ಪ್ರಜಾಪ್ರಾತಿನಿಧ್ಯ ಕಾಯ್ದೆ ಮತ್ತು ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಆ್ಯಂಟನಿ ಅವರನ್ನು ಅನರ್ಹಗೊಳಿಸಿರುವುದಾಗಿ ಕೇರಳ ವಿಧಾನಸಭೆಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಅವರ ಅನರ್ಹತೆಯು ತೀರ್ಪು ಪ್ರಕಟವಾದ ದಿನದಿಂದಲೇ ಜಾರಿಯಾಗಿದೆ.

ಪ್ರಾದೇಶಿಕ ಪಕ್ಷ ಜನಾಧಿಪತ್ಯ ಕೇರಳ ಕಾಂಗ್ರೆಸ್ನ ಏಕೈಕ ಶಾಸಕರಾಗಿದ್ದ ಆ್ಯಂಟನಿ ಅವರು ವೃತ್ತಿಯಲ್ಲಿ ವಕೀಲರಾಗಿದ್ದರು. ಮಾದಕವಸ್ತುಗಳ ಕಳ್ಳ ಸಾಗಣೆ ಪ್ರಕರಣದಲ್ಲಿ ಆಸ್ಟ್ರೇಲಿಯಾ ಪ್ರಜೆಯೊಬ್ಬನನ್ನು 1990ರಲ್ಲಿ ಬಂಧಿಸಲಾಗಿತ್ತು. ಆತನ ಪರ ವಕೀಲರಾಗಿದ್ದ ಆ್ಯಂಟನಿ, ಆರೋಪಿಯು ಮಾದಕವಸ್ತುಗಳ ಕಳ್ಳಸಾಗಾಣೆಗೆ ಬಳಸಿದ್ದ ಒಳಉಡುಪನ್ನು ಸಹೋದ್ಯೋಗಿಯೊಬ್ಬನ ಸಹಾಯದಿಂದ ಬದಲಾಯಿಸಿ, ಬೇರೆ ಬಟ್ಟೆಯನ್ನು ನ್ಯಾಯಾಲಯಕ್ಕೆ ನೀಡಿದ್ದರು. ಆ ಉಡುಪು ಆರೋಪಿಗೆ ಹೊಂದಿಕೆಯಾಗದ ಕಾರಣ ಆತನನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿತ್ತು. ಆದರೆ ಸಾಕ್ಷ್ಯಗಳನ್ನು ತಿರುಚಿರುವುದು ನಂತರ ನಡೆದ ತನಿಖೆಯಲ್ಲಿ ಪತ್ತೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.