ಮಳಪ್ಪುರಂ: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಸಂದರ್ಭದಲ್ಲಿ ಸಾರ್ವಜನಿಕವಾಗಿ ನಗ್ನತೆ ಪ್ರದರ್ಶಿಸಿದ ಆರೋಪದಡಿ ಕೇರಳದ ಉತ್ತರ ಭಾಗದ ತವನೂರ್ ಮಂಡಳದ ಬೂತ್ ಮಟ್ಟದ ಅಧಿಕಾರಿಯನ್ನು ಚುನಾವಣಾ ಕರ್ತವ್ಯದಿಂದ ತೆರವುಗೊಳಿಸಲಾಗಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತವು, ಬಿಎಲ್ಒಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.

ಘಟನೆಯು ಕಳೆದ ವಾರದ ನಡೆದಿದೆ. ಇದರ ವಿಡಿಯೊವನ್ನು ಕೆಲ ಟಿ.ವಿ. ವಾಹಿನಿಗಳು ಪ್ರಸಾರ ಮಾಡಿದ್ದವು. ದೃಶ್ಯದಲ್ಲಿ ಮತದಾರರಿಗೆ ಅರ್ಜಿ ನೀಡಿದ ವ್ಯಕ್ತಿ ತಕ್ಷಣ ತನ್ನ ಲುಂಗಿಯನ್ನು ಬಿಚ್ಚಿದ್ದಾನೆ. ಈ ಸಂದರ್ಭದಲ್ಲಿ ಮಹಿಳೆಯರನ್ನೂ ಒಳಗೊಂಡು ಬಹಳಷ್ಟು ಜನರಲ್ಲಿ ಅಲ್ಲಿ ಸೇರಿದ್ದರು.

ನ. 23ರಂದು ಈ ವಿಷಯವು ಚುನಾವಣಾ ನೋಂದಣಿ ಅಧಿಕಾರಿ ಗಮನಕ್ಕೆ ಬಂದಿತು. ಜಿಲ್ಲಾಧಿಕಾರಿ ವಿ.ಆರ್. ವಿನೋದ್ ಅವರು ನಗ್ನತೆ ಪ್ರದರ್ಶಿಸಿದ ವ್ಯಕ್ತಿಯನ್ನು ತಕ್ಷಣದಿಂದ ಕರ್ತವ್ಯದಿಂದ ಬಿಡುಗಡೆ ಮಾಡಿದ್ದಾರೆ. ಮತ್ತೊಬ್ಬ ಅಧಿಕಾರಿಯನ್ನು ಬಿಎಲ್ಒ ಆಗಿ ನೇಮಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.