ಅಲಪ್ಪುಳ: ತನ್ನ ನಾಲ್ಕೂವರೆ ವರ್ಷದ ಮಗನ ಪುಷ್ಠಭಾಗ ಮತ್ತು ಕಾಲಿಗೆ ಕಾದ ಸ್ಟೀಲ್ ಚಮಚದಲ್ಲಿ ಬರೆ ಎಳೆದ ತಾಯಿಯನ್ನು ಬಂಧಿಸಿದ ಪ್ರಕರಣ ಕೇರಳದ ಕಾಯಂಕುಲಂನಲ್ಲಿ ನಡೆದಿದೆ.

ಘಟನೆ ಸೆ. 22ರಂದು ನಡೆದಿದೆ. ಮಗುವಿನ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಮಕ್ಕಳ ನ್ಯಾಯ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಚಡ್ಡಿಯಲ್ಲಿ ಮಲ, ಮೂತ್ರ ವಿಸರ್ಜನೆ ಮಾಡುತ್ತಿದ್ದ ಎಂದು ಮಗನ ಮೇಲೆ ಕೋಪಗೊಂಡ ಮಹಿಳೆ, ಬರೆ ಹಾಕಿ ಘಾಸಿಗೊಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕನಕಕುನ್ನು ಪೊಲೀಸ್ ಠಾಣೆ ಪೊಲೀಸರು ತಿಳಿಸಿದ್ದಾರೆ.

‘ಮಗುವನ್ನು ಆಸ್ಪತ್ರೆಗೆ ಕರೆದೊಯ್ದ ತಾಯಿ, ಮಗು ಬಿಸಿ ಒಲೆ ಮೇಲೆ ಕುಳಿತಿದ್ದರಿಂದ ಗಾಯವಾಗಿದೆ ಎಂದಿದ್ದರು. ಆದರೆ ಆಕೆಯ ಅತ್ತೆ, ಮಾವ ನಡೆದ ವಾಸ್ತವವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಅವರ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.