ಕೋಲ್ಕತ್ತ(ಪಶ್ಚಿಮ ಬಂಗಾಳ): ಪ್ರಯಾಣಿಕನೊಬ್ಬ ಮೆಟ್ರೊ ರೈಲಿನ ಬಾಗಿಲುಗಳಿಗೆ ಕಪ್ಪು ಬಣ್ಣ ಬಳಿಯುವ ಮೂಲಕ ವಿರೂಪಗೊಳಿಸಲು ಯತ್ನಿಸಿದ ಘಟನೆ ಕೋಲ್ಕತ್ತ ಮೆಟ್ರೊ ರೈಲಿನಲ್ಲಿ ಬುಧವಾರ ನಡೆದಿದೆ.

ಘಟನೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಕಪ್ಪು ಬಣ್ಣದ ಸ್ಪ್ರೇ ಬಾಟಲಿ ಹಿಡಿದಿದ್ದ ವ್ಯಕ್ತಿ ಚಲಿಸುತ್ತಿರುವ ಮೆಟ್ರೊ ರೈಲಿನ ಬಾಗಿಲುಗಳಿಗೆ ಬಣ್ಣ ಬಳಿಯುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಒಂದು ಬಾಗಿಲಿನ ಮೇಲೆ ‘ಎಕ್ಸ್’ ಚಿಹ್ನೆಯನ್ನು ಬರೆದಿರುವುದು ಕಂಡುಬಂದಿದೆ.

ಆದರೆ, ಇತರ ಪ್ರಯಾಣಿಕರು ಕೃತ್ಯವನ್ನು ನೋಡಿಯೂ, ಸುಮ್ಮನೆ ಕುಳಿತಿರುವುದು ಅಚ್ಚರಿ ಉಂಟು ಮಾಡಿದೆ.

‘ನೀಲಿ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರೊ ರೇಕ್ನ(ಎಂಆರ್–409) ಕೋಚ್ ಸಂಖ್ಯೆ 4036 ರ ಬಾಗಿಲು ಸಂಖ್ಯೆ 5 ಅನ್ನು ಪ್ರಯಾಣಿಕೊಬ್ಬರು ಕಪ್ಪು ಬಣ್ಣದಿಂದ ವಿರೂಪಗೊಳಿಸಿದ್ದಾರೆ. ಇದರಿಂದ ಕೋಚ್ನ ಸೌಂದರ್ಯಕ್ಕೆ ಹಾನಿಯಾಗಿದೆ’ ಎಂದು ಕೋಲ್ಕತ್ತ ಮೆಟ್ರೊ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

‘ಸಿಸಿಟಿವಿ ಕ್ಯಾಮೆರಾಗಳ ಸಹಾಯದಿಂದ ಕೃತ್ಯದಲ್ಲಿ ಭಾಗಿಯಾದ ವ್ಯಕ್ತಿಯನ್ನು ಸುಲಭವಾಗಿ ಗುರುತಿಸಬಹುದಾಗಿದೆ. ಇಂತಹ ಕೃತ್ಯದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದೆ.

‘ಈ ರೀತಿಯ ಘಟನೆಗಳು ಪುನರಾವರ್ತನೆಯಾಗದಂತೆ ಪ್ರಯಾಣಿಕರಿಗೆ ಮನವಿ ಮಾಡಿದೆ. ಅಲ್ಲದೇ ಇಂತಹ ದುಷ್ಕೃತ್ಯಗಳಲ್ಲಿ ತೊಡಗಿದವರನ್ನು ಅಲ್ಲೇ ತಡೆದು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.