ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಆರ್‌ಎಸ್‌ಎಸ್‌ನಿಂದ ಶಿಸ್ತು ಕಲಿಯಿರಿ' ಎಂದ ಕಾಂಗ್ರೆಸ್ ನೇತಾರ

Last Updated 7 ಆಗಸ್ಟ್ 2018, 11:30 IST
ಅಕ್ಷರ ಗಾತ್ರ

ಭೋಪಾಲ್ : ಮಧ್ಯ ಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರ ಸಭೆಯೊಂದರಲ್ಲಿ 'ಆಸನ ವ್ಯವಸ್ಥೆ' ಬಗ್ಗೆ ಕಾರ್ಯರ್ತರು ಪರಸ್ಪರ ಜಗಳವಾಡಿದಾಗ, 'ಆರ್‌ಎಸ್‌ಎಸ್‌ನಿಂದ ಶಿಸ್ತು ಕಲಿಯಿರಿ' ಎಂದು ಕಾಂಗ್ರೆಸ್ ನೇತಾರ ದೀಪಕ್ ಬಾಬರಿಯಾ ಹೇಳಿದ್ದಾರೆ.

ಮಧ್ಯಪ್ರದೇಶದ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ಬಾಬರಿಯಾ ಸೋಮವಾರ ವಿಧಿಶಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಈ ವೇಳೆ ಕಾಂಗ್ರೆಸ್‍ನ ವ್ಯವಸ್ಥಾಪಕ ಸಮಿತಿಯ ಸಭೆಯನ್ನೂ ಕರೆಯಲಾಗಿತ್ತು.ಈ ಸಭೆಯಲ್ಲಿ ಭಾಗವಹಿಸುವ ಎಲ್ಲ ಜಿಲ್ಲಾ ನೇತಾರರಿಗೂ ಆಸನ ವ್ಯವಸ್ಥೆ ಮಾಡಲಾಗಿತ್ತು, ಆದರೆ ರಾಜಮನೆತನ ಸಿಂಧು ವಿಕ್ರಮ್ ಸಿಂಗ್ ಬನಾ ಎಂಬವರಿಗೆ ಆಸನ ವ್ಯವಸ್ಥೆ ಮಾಡಿಲ್ಲ ಎಂಬುದು ತರ್ಕಕ್ಕೆ ಕಾರಣವಾಗಿತ್ತು. ವಿಕ್ರಮ್ ಸಿಂಗ್ ಈ ಬಾರಿ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಆಕಾಂಕ್ಷಿಯಾಗಿದ್ದಾರೆ.

ವಿಕ್ರಮ್ ಸಿಂಗ್ ಅವರಿಗೆ ಆಸನ ವ್ಯವಸ್ಥೆ ಮಾಡದೇ ಇರುವುದಕ್ಕೆ ಅಸಮಧಾನಗೊಂಡು ಇನ್ನೊಬ್ಬ ಕಾಂಗ್ರೆಸ್ ನೇತಾರ ಮೆಹಮ್ಮದ್ ಕಾಮಿಲ್ ದೂರು ನೀಡಿದ್ದರು.ಇದೇ ವಿಷಯದಲ್ಲಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಿಗೆ ಮತ್ತು ಕಾಮಿಲ್ ನಡುವೆ ಜಗಳವುಂಟಾಗಿದೆ. ಸಭೆಯಲ್ಲಿ ನೂಕಾಟ, ತಳ್ಳಾಟ ನಡೆದಾಗ ಜಗಳ ನಿಲ್ಲಿಸುವಂತೆ ಒತ್ತಾಯಿಸಿದ ಬಾಬರಿಯಾ ಆರ್‌ಎಸ್‌ಎಸ್‌ನಿಂದ ಶಿಸ್ತು ಕಲಿಯಿರಿ ಎಂದಿದ್ದಾರೆ.

ಅದರಲ್ಲಿ ತಪ್ಪೇನಿದೆ?
ಚೀನಾ ಯುದ್ದದ ವೇಳೆ ಪಂಡಿತ್ ನೆಹರೂ ಅವರು ಆರ್‌ಎಸ್‌ಎಸ್‌ನ್ನು ಬಳಸಿದ್ದರು.ಅದಕ್ಕೆಲ್ಲಾ ಅವರ ಶಿಸ್ತೇ ಕಾರಣ. ಯಾವಸಂಘಟನೆಯೇ ಆಗಲಿಒಳ್ಳೆತನ ಇದ್ದರೆ ಅದನ್ನು ಮೆಚ್ಚಿಕೊಳ್ಳುವುದರಲ್ಲಿ ಯಾವತಪ್ಪೂಇಲ್ಲ. ಪೈಪೋಟಿಇರುವಲ್ಲಿ ಇಂಥಾ ಘಟನೆಗಳು ನಡೆಯುತ್ತವೆ.ಅವರು (ಕಾಂಗ್ರೆಸ್ ಕಾರ್ಯಕರ್ತರು) ಶಿಸ್ತನ್ನು ಅಳವಡಿಸಿಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಬಾಬರಿಯಾ ಹೇಳಿರುವುದಾಗಿ ಎನ್‍ಡಿಟಿವಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT