ನವದೆಹಲಿ: ಭಾರತದಿಂದ ರಫ್ತು ಮಾಡುವ ಸರಕುಗಳಿಗೆ ಶೇಕಡ 50ರಷ್ಟು ಸುಂಕ ವಿಧಿಸುವ ಅಮೆರಿಕದ ನಡೆ ‘ಬೆದರಿಕೆ ತಂತ್ರ’ವಾಗಿದ್ದು, ದೇಶದ ಸ್ವಾಯತ್ತತೆ ಕಾಪಾಡುವ ನಿಟ್ಟಿನಲ್ಲಿ ಮೋದಿ ಸರ್ಕಾರವು ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಎಡಪಕ್ಷಗಳು ಆಗ್ರಹಿಸಿವೆ.

‘ಟ್ರಂಪ್ ಸರ್ಕಾರವು ನಿರಂಕುಶ ಹಾಗೂ ಸರ್ವಾಧಿಕಾರತನದ ನಡೆ ಪ್ರದರ್ಶಿಸಿದೆ’ ಎಂದು ಸಿಪಿಎಂ ಪಾಲಿಟ್ ಬ್ಯುರೊ ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

‘ಭಾರತದಿಂದ ರಫ್ತಾಗುವ ವಸ್ತುಗಳಿಗೆ ಶೇಕಡಾ 50ರಷ್ಟು ಸುಂಕ ಹೇರಿದ ಅಮೆರಿಕದ ನಿರ್ಧಾರವನ್ನು ಸಿಪಿಎಂ ಕಟುವಾಗಿ ಖಂಡಿಸುತ್ತದೆ. ಅಮೆರಿಕ ಸರ್ಕಾರ ಅನುಸರಿಸುತ್ತಿರುವ ಬೆದರಿಕೆ ತಂತ್ರವು ನಿರಂಕುಶ, ಸರ್ವಾಧಿಕಾರಿತನದ ನಡೆಯಾಗಿದೆ’ ಎಂದು ಸಿಪಿಎಂ ತಿಳಿಸಿದೆ.

‘ರಷ್ಯಾದ ಜೊತೆಗೆ ವ್ಯಾಪಾರ ಸಂಬಂಧ ಮುಂದುವರಿಸದಂತೆ, ಅಮೆರಿಕ ಹಾಗೂ ಐರೋಪ್ಯ ಒಕ್ಕೂಟವು ಭಾರತದ ಮೇಲೆ ಒತ್ತಡ ಹೇರುತ್ತಿವೆ. ಆದರೆ, ಆ ರಾಷ್ಟ್ರಗಳು ಮಾತ್ರ ರಷ್ಯಾದ ಜೊತೆಗೆ ವ್ಯಾಪಾರ ವಹಿವಾಟು ಮುಂದುವರಿಸಿವೆ’ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.