ದಿನ ಭವಿಷ್ಯ: ಈ ರಾಶಿಯವರಿಗೆ ಮಹತ್ವದ ಮಾತುಕತೆ ನಡೆಸಲು ಒಳ್ಳೆಯ ಸಮಯ
Published 6 ಆಗಸ್ಟ್ 2025, 19:24 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮಹತ್ವದ ಮಾತುಕತೆ ನಡೆಸಲು ಒಳ್ಳೆಯ ಸಮಯ. ಸಂಯಮದಿಂದ ವರ್ತಿಸಿ. ಹಂತ–ಹಂತವಾಗಿ ಕುಟುಂಬದಲ್ಲಿ ನೆಮ್ಮದಿ ಕಾಣುವಿರಿ. ರಾಮಾಯಣ, ಮಹಾಭಾರತದಂತಹ ಧರ್ಮ ಗ್ರಂಥಗಳ ಓದಿನಲ್ಲಿ ಆಸಕ್ತಿ ಹುಟ್ಟಲಿದೆ.
ವೃಷಭ
ಕಷ್ಟದ ಕಾಲವೆಲ್ಲವೂ ದೂರಾಗುವ ಸಾಧ್ಯತೆ ಇರಲಿದೆ. ಒಣ ದ್ರಾಕ್ಷಿ, ಗೋಡಂಬಿ, ಉತ್ತುತೆ ಮತ್ತು ಎಲಕ್ಕಿ ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ. ಸುವ್ಯವಸ್ಥೆಯಿಂದ ಕೂಡಿದ ದಿನವಾಗಿರುವುದು.
ಮಿಥುನ
ಸಂವಹನ ಕಲೆ ಪರೀಕ್ಷೆಗೆ ಒಳಗಾಗಲಿದೆ. ನಿತ್ಯದ ಜೀವನ ಕ್ರಮವನ್ನು ಯಾವುದೇ ಕಾರಣಕ್ಕೂ ಬದಲಿಸದೆ ಹಿಂದಿನಂತೆ ಮುಂದುವರಿಸಿ. ಈಗಿರುವ ಉದ್ಯೋಗದಲ್ಲಿ ಸ್ಥಿರತೆ ಮತ್ತು ಧನಾನುಕೂಲತೆ ಇರುತ್ತದೆ.
ಕರ್ಕಾಟಕ
ಸರ್ಕಾರಿ ಕೆಲಸಗಳು ಮುಕ್ತಾಯದ ಹಂತಕ್ಕೆ ಬರುವುದು. ಷೇರು ವ್ಯವಹಾರಗಳು ಲಾಭ ತರಲಿವೆ. ಮಾಡುವ ಕೆಲಸ ಕ್ರಿಯಾಶೀಲತೆಗೆ ಒತ್ತು ನೀಡುವುದರಿಂದ ಹೊಸ ಹುರುಪು ಮೂಡಲಿದೆ.
ಸಿಂಹ
ಕಬ್ಬು ಬೆಳೆಯುವುದರ ಜೊತೆಗೆ ವ್ಯಾಪಾರ ಹೊಂದಿರುವಂಥವರಿಗೆ ಲಾಭದ ದಿನ. ಯಾರಿಗೂ ತಿಳಿಯದೆ ಮಾಡಿದೆ ಎಂದು ತಿಳಿದ ಕಾರ್ಯವು ಜಗಜ್ಜಾಹೀರಾಗುವ ಪ್ರಸಂಗಗಳು ಎದುರಾಗಬಹುದು.
ಕನ್ಯಾ
ಮೊಂಡು ಹಠವು ಪೋಷಕರ ಹಾಗೂ ಕುಟುಂಬ ವರ್ಗದ ಚಿಂತೆಗೆ ಕಾರಣವಾಗಬಹುದು. ಅವರೋಹಣ ಪ್ರಕ್ರಿಯೆಯಲ್ಲಿರುವ ಷೇರು ವ್ಯವಹಾರಗಳು ನಿಧಾನಗತಿಯಲ್ಲಿ ಆರೋಹಣ ಪ್ರಕ್ರಿಯೆಗೆ ಬರುತ್ತವೆ.
ತುಲಾ
ಸೋಮಾರಿತನ ಮಾಡದೇ ಸೂಕ್ತ ಸಮಯದಲ್ಲಿ ಸರಿಯಾದ ಕೆಲಸ ಮಾಡುವುದರಿಂದ ಅದೃಷ್ಟ ಖುಲಾಯಿಸಲಿದೆ. ಶೈಕ್ಷಣಿಕ ರಂಗದಲ್ಲಿ ವಿದ್ಯಾರ್ಥಿ ಹಾಗೂ ಅಧ್ಯಾಪಕರಿಗೆ ಯಶಸ್ಸು ಸಿಗುತ್ತದೆ.
ವೃಶ್ಚಿಕ
ಉನ್ನತ ಸ್ಥಾನಕ್ಕೆ ತಲುಪಿರುವ ನಿಮ್ಮ ಮಕ್ಕಳು ಆಗುಹೋಗುಗಳಿಗೆ ಎಳ್ಳಿನಿತೂ ಗಮನ ಕೊಡದಿರುವುದು ಬೇಸರಕ್ಕೆ ಕಾರಣವಾಗಬಹುದು. ಮನೆಯನ್ನು ಯುದ್ಧರಂಗವಾಗದಂತೆ ತಡೆಗಟ್ಟ ಬೇಕಾಗುತ್ತದೆ.
ಧನು
ಮಕ್ಕಳ ಎಲ್ಲಾ ವಿಚಾರಗಳಲ್ಲೂ ಮೃದು ಮನಸ್ಸಿನ ಆಲೋಚನೆಗಳನ್ನೇ ಮಾಡಿದಲ್ಲಿ ಫಲಿತಾಂಶ ನೀವಂದುಕೊಂಡ ರೀತಿಯಲ್ಲಿ ಇರುವುದಿಲ್ಲ. ನೂತನ ಉದ್ಯೋಗ ದೊರೆತು ಸಮಾಧಾನವಾಗುವುದು.
ಮಕರ
ಬರಹಗಾರರಾಗಬೇಕು ಎಂಬ ಪಥದಲ್ಲಿ ಸಾಗುತ್ತಿರುವವರಿಗೆ ಪ್ರಸಿದ್ಧ ಬರಹಗಾರರ ಬರಹಗಳನ್ನು ಓದಿ ಬರವಣಿಗೆಗೆ ರೂಪುರೇಷೆ ದೊರೆಯುತ್ತದೆ. ಹೂಡಿಕೆ ಮಾಡುವವರು ಜಾಗರೂಕತೆಯಿಂದ ವರ್ತಿಸಿ.
ಕುಂಭ
ಯಾವುದೇ ಆಹಾರವಾಗಲಿ ಹಿತವಾಗಿ, ಮಿತವಾಗಿ ಸೇವಿಸುವುದು ಉತ್ತಮ. ಸಂಪೂರ್ಣ ಸಾವಯವ ವ್ಯವಸಾಯವನ್ನು ಮಾಡಿ ತಾಜಾ ತರಕಾರಿ ಹಾಗೂ ಹಣ್ಣುಗಳ ಮಾರಾಟಗಾರರಿಗೆ ಲಾಭ ಅಧಿಕವಾಗಲಿದೆ.
ಮೀನ
ಹಣಕಾಸಿನ ವ್ಯವಹಾರ ನಡೆಸುವವರು ನೂತನ ಯೋಜನೆಗಳನ್ನು ವಿಸ್ತರಿಸಬಹುದು. ಉನ್ನತ ಅಧಿಕಾರಿಗಳ ಸಂಪರ್ಕ ಉಂಟಾಗುವುದು. ಸಂಪರ್ಕ ಸಾಧನದಂಥ ಉದ್ಯೋಗ ನಿರತರಿಗೆ ಗೌರವ ಲಭಿಸಲಿದೆ.