ಕಟಕ್: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಮುಕ್ತಾಯಗೊಂಡಿದೆ. ಈ ಸರಣಿಯನ್ನು ಭಾರತ 2–1ರಿಂದ ಗೆದ್ದುಕೊಂಡಿದೆ. ಸದ್ಯ, ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ಟಿ20 ತಂಡ ನಾಳೆ (ಮಂಗಳವಾರ) ಯಿಂದ ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯಗಳ ಟಿ20 ಸರಣಿ ಆಡಲಿದೆ.

ಪಂದ್ಯದ ನೇರಪ್ರಸಾರ ಎಷ್ಟು ಗಂಟೆಗೆ?

ಟಿ20 ಸರಣಿಯ ಎಲ್ಲಾ ಐದು ಪಂದ್ಯಗಳು ಕೂಡ ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಆರಂಭಗೊಳ್ಳಲಿವೆ. ಈ ಪಂದ್ಯಗಳ ಟಾಸ್ ಪ್ರಕ್ರಿಯೆ 6.30ಕ್ಕೆ ಜರುಗಲಿದೆ.

ಎಲ್ಲಿ ನೋಡಬಹುದು?

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟಿ20 ಸರಣಿಯ ನೇರಪ್ರಸಾರ ಸ್ಟಾರ್ ಸ್ಪೋಟ್ಸ್ನಲ್ಲಿ ಇರಲಿದೆ. ಮಾತ್ರವಲ್ಲ, ಜಿಯೋ ಹಾಟ್ಸ್ಟಾರ್ನಲ್ಲಿ ಕೂಡ ವೀಕ್ಷಿಸಬಹುದು.
.ನೂರು 'ನೂರು': ಸಚಿನ್ ದಾಖಲೆ ಮುರಿಯುವರೇ ಕೊಹ್ಲಿ: ಗವಾಸ್ಕರ್ ಹೇಳಿದ್ದಿಷ್ಟು....ದ.ಆಫ್ರಿಕಾ ವಿರುದ್ಧ ಟಿ20 ಸರಣಿ; ತಂಡಕ್ಕೆ ಮರಳಿದ ಗಿಲ್, ಹಾರ್ದಿಕ್.
ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ಭಾಗವಾಗಿದ್ದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ತಂಡದಲ್ಲಿ ಇರುವುದಿಲ್ಲ. ಸೂರ್ಯಕುಮಾರ್ ಯಾದವ್ ಈ ತಂಡವನ್ನು ಮುನ್ನಡೆಸಲಿದ್ದಾರೆ.

ಮೊದಲ ಪಂದ್ಯ– ಬಾರಾಬತಿ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನ (ಕಟಕ್)

ದ್ವಿತೀಯ ಪಂದ್ಯ– ಪಿಸಿಎ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನ(ಚಂಡೀಗಢ)

ಮೂರನೇ ಪಂದ್ಯ–ಧರ್ಮಶಾಲಾ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನ

ನಾಲ್ಕನೇ ಪಂದ್ಯ–ಲಖನೌ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನ

ಕೊನೆಯ ಪಂದ್ಯ–ಅಹಮದಾಬಾದ್ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.