ಪ್ರಜಾವಾಣಿ ವಾರ್ತೆ

ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದು ಖ್ಯಾತಿ ಪಡೆದಿರುವ ಇಲ್ಲಿನ ಗವಿಸಿದ್ಧೇಶ್ವರ ಮಠದ ಜಾತ್ರೆಯ ಮಹಾರಥೋತ್ಸವ 2026ರ ಜನವರಿ 5ರಂದು ನಡೆಯಲಿದ್ದು, ಮೇಘಾಲಯದ ರಾಜ್ಯಪಾಲ ಕನ್ನಡಿಗ ಸಿ.ಎಚ್. ವಿಜಯಶಂಕರ್ ಅವರು ಉದ್ಘಾಟನೆ ನೆರವೇರಿಸುವರು. ಅಂದು ಸಂಜೆ 5.30ಕ್ಕೆ ಮಹಾರಥೋತ್ಸವ ಜರುಗಲಿದೆ.

ಈ ಕುರಿತು ಗವಿಮಠ ತನ್ನ ಪ್ರಕಟಣೆ ಹೊರಡಿಸಿದ್ದು ’ಈ ಬಾರಿ ಸಿ.ಎಚ್. ವಿಜಯಶಂಕರ್ ಜಾತ್ರೆ ಉದ್ಘಾಟಿಸುವರು’ ಎಂದು ತಿಳಿಸಿದೆ.

ಅವರು ಮೂಲತಃ ಜಿಲ್ಲೆಯ ಕುಕನೂರು ತಾಲ್ಲೂಕಿನ ಬಿನ್ನಾಳ ಗ್ರಾಮದವರು. ಇದೇ ವರ್ಷದ ಫೆ. 22ರಂದು ವಿಜಯಶಂಕರ್ ಅವರು ಗವಿಮಠಕ್ಕೆ ಭೇಟಿ ನೀಡಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಯ ಆಶೀರ್ವಾದ ಪಡೆದುಕೊಂಡಿದ್ದರು. ಆಗ ರೇಷ್ಮೆ ಶಾಲು ಹಾಗೂ ರಾಜಭವನದ ಸಂಕೇತವಿರುವ ಉಡುಗೊರೆಯನ್ನು ಸ್ವಾಮೀಜಿ ಉಡುಗೊರೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.