ಸ್ಯಾಂಟಿಯಾಗೊ (ಚಿಲಿ): ಎಫ್ಐಎಚ್ ಜೂನಿಯರ್ ಮಹಿಳಾ ವಿಶ್ವಕಪ್ನಲ್ಲಿ ಕ್ವಾರ್ಟರ್ ಫೈನಲ್ ಸ್ಪರ್ಧೆಯಿಂದ ಹೊರಬಿದ್ದಿರುವ ಭಾರತ ತಂಡವು ಒಂಬತ್ತನೇ ಸ್ಥಾನದ
ಪ್ರಯತ್ನದಲ್ಲಿದ್ದು, ಭಾನುವಾರ ನಡೆದ ಪಂದ್ಯದಲ್ಲಿ 3–1ರಿಂದ ವೇಲ್ಸ್ ವಿರುದ್ಧ ಜಯ ಸಾಧಿಸಿದೆ.

ಭಾರತ ಪರ ಹಿನಾ ಬಾನೊ (14ನೇ ನಿಮಿಷ), ಸುನೆಲಿಟಾ ಟೊಪ್ಪೊ (24ನೇ), ಮತ್ತು ಇಶಿಕಾ (31ನೇ) ಗೋಲು ದಾಖಲಿಸಿದರೆ, ವೇಲ್ಸ್ ಪರ ಎಲೋಯಿಸ್ ಮೋಟ್ (52ನೇ) ಏಕೈಕ ಗೋಲು ಗಳಿಸಿದರು. ಭಾರತ ತಂಡವು ಸಿ ಗುಂಪಿನಲ್ಲಿ ಎರಡು ಜಯ ಮತ್ತು ಒಂದು ಸೋಲಿನೊಂದಿಗೆ ಎರಡನೇ ಸ್ಥಾನ ಗಳಿಸಿ ನಾಕೌಟ್ ರೇಸ್ನಿಂದ ಹೊರಬಿದ್ದಿದೆ.

ಆರು ಗುಂಪುಗಳಲ್ಲಿ ಅಗ್ರಸ್ಥಾನ ಪಡೆದ ಆರು ತಂಡಗಳು ಮತ್ತು ಎರಡನೇ ಸ್ಥಾನ ಪಡೆದು, ಅತ್ಯುತ್ತಮ ಪಾಯಿಂಟ್ಸ್ ಹೊಂದಿರುವ ಎರಡು ತಂಡಗಳು
ಕ್ವಾರ್ಟರ್ಫೈನಲ್ ಪ್ರವೇಶಿಸಲಿವೆ.

ಭಾರತ ತಂಡವು ಮಂಗಳವಾರ ಉರುಗ್ವೆ ವಿರುದ್ಧ ಸೆಣಸಲಿದೆ. ಈ ಪಂದ್ಯದ ವಿಜೇತರು 9ನೇ ಸ್ಥಾನಕ್ಕಾಗಿ ಹಣಾಹಣಿ ನಡೆಸಲಿದ್ದಾರೆ.

ಸೋತ ತಂಡವು 11ನೇ ಸ್ಥಾನಕ್ಕಾಗಿ ಹೋರಾಟ ನಡೆಸಲಿದೆ.

ಅಮಿರುಲ್ ಹ್ಯಾಟ್ರಿಕ್: ಆಸ್ಟ್ರಿಯಾ ವಿರುದ್ಧ ಬಾಂಗ್ಲಾಕ್ಕೆ ಜಯ

ಮದುರೈ: ಉದಯೋನ್ಮುಖ ಡ್ರ್ಯಾಗ್ ಫ್ಲಿಕರ್ ಅಮಿರುಲ್ ಇಸ್ಲಾಂ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಬಾಂಗ್ಲಾದೇಶ ತಂಡವು ಸೋಮವಾರ ಇಲ್ಲಿ ನಡೆದ ಎಫ್ಐಎಚ್ ಜೂನಿಯರ್ ಪುರುಷರ ಹಾಕಿ ವಿಶ್ವಕಪ್ನಲ್ಲಿ 5–4ರಿಂದ ಆಸ್ಟ್ರಿಯಾ ತಂಡವನ್ನು ಮಣಿಸಿ ಒಟ್ಟಾರೆ 17ನೇ ಸ್ಥಾನ ಗಳಿಸಿತು.

ಟೂರ್ನಿಯಲ್ಲಿ ಒಟ್ಟು 18 ಗೋಲುಗಳನ್ನು ಗಳಿಸಿರುವ ಅಮಿರುಲ್ ಅವರು ತಂಡದ ಸ್ಥಾನ ನಿರ್ಣಯ (ಕ್ಲಾಸಿಫಿಕೇಷನ್) ಪಂದ್ಯದಲ್ಲೂ ಮಿಂಚಿದರು.

ಪೆನಾಲ್ಟಿ ಕಾರ್ನರ್ನಿಂದ ಅದ್ಭುತವಾಗಿ ಗೋಲು ಗಳಿಸುವ ಮೂಲಕ ಟೂರ್ನಿಯಲ್ಲಿ ಸಂಚಲನ ಮೂಡಿಸಿರುವ ಅಮಿರುಲ್ 15ನೇ, 50ನೇ ಮತ್ತು 57ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿದರು. ಹೊಝಿಫಾ ಹುಸೇನ್ (27ನೇ) ಮತ್ತು ರಕಿಬುಲ್ ಹಸನ್ (35ನೇ) ಬಾಂಗ್ಲಾ ಪರ ಗೋಲು ಗಳಿಸಿದ ಇತರರು.

ಆಸ್ಟ್ರಿಯಾ ಪರ ಆಂಡೋರ್ ಲೊಸೊನ್ಸಿ (44ನೇ), ಜೂಲಿಯನ್ ಕೈಸರ್ (57ನೇ) ಮತ್ತು ಮಾಟೆಯುಸ್ಜ್ ನೈಕೋವಿಯಕ್ (59ನೇ) ಗೋಲು ಗಳಿಸಿದರು.

ಇದಕ್ಕೂ ಮೊದಲು ಈಜಿಪ್ಟ್ ತಂಡವು ಪೆನಾಲ್ಟಿ ಶೂಟೌಟ್ನಲ್ಲಿ 3–2ರಿಂದ ಕೆನಡಾ ತಂಡವನ್ನು ಮಣಿಸಿ 21ನೇ ಸ್ಥಾನ ಗಳಿಸಿತು. ನಿಗದಿತ ಅವಧಿಯಲ್ಲಿ ಪಂದ್ಯವು 2–2 ಅಂತರದಿಂದ ಟೈ ಆಗಿತ್ತು.

ಕೊರಿಯಾ ತಂಡವು 5-4 ಅಂತರರಿಂದ ಚೀನಾ ವಿರುದ್ಧ ಜಯ ಸಾಧಿಸಿ 19ನೇ ಸ್ಥಾನ ಗಳಿಸಿತು. 24 ತಂಡಗಳ ಈ ಟೂರ್ನಿಯಲ್ಲಿ ನಮೀಬಿಯಾ 4-2ರಿಂದ ಒಮಾನ್ ತಂಡವನ್ನು ಸೋಲಿಸಿ 23ನೇ ಸ್ಥಾನ ಗಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.