2025ರ ಆರಂಭದಲ್ಲೇ ಪಾಕಿಸ್ತಾನದ ಆತಿಥ್ಯದಲ್ಲಿ ನಡೆದ ಏಕದಿನ ಕ್ರಿಕೆಟ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿತು.

ಸ್ಟಾರ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರು ಟೆಸ್ಟ್ ಮಾದರಿಗೆ ಇದೇ ವರ್ಷ ವಿದಾಯ ಹೇಳಿದರು. ದೀರ್ಘ ಮಾದರಿಯ ಪರಿಣತ ಬ್ಯಾಟರ್ ಚೇತೇಶ್ವರ್ ಪೂಜಾರ, ವೃದ್ಧಿಮಾನ್ ಸಾಹ ಕೂಡ ಹೊರನಡೆದರು.

ಅನುಭವಿಗಳ ಅನುಪಸ್ಥಿತಿಯಲ್ಲಿ ಭಾರತ ತಂಡ ಶುಭಮನ್ ಗಿಲ್ ನಾಯಕತ್ವದಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿತು. 14ನೇ ವರ್ಷಕ್ಕೇ ಐಪಿಎಲ್ನಲ್ಲಿ ಆಡುವ ಅವಕಾಶ ಪಡೆದ ವೈಭವ್ ಸೂರ್ಯವಂಶಿ ಅವರು ರಾಜಸ್ಥಾನ ರಾಯಲ್ಸ್ ಪರ ಪರ ಐಪಿಎಲ್ಗೆ ಪದಾರ್ಪಣೆ ಮಾಡಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18 ವರ್ಷಗಳ ಬಳಿಕ ಪಟ್ಟಕ್ಕೇರಿತು. ಮಹಿಳೆಯರ ವಿಶ್ವಕಪ್ ತಂಡವು, ಏಕದಿನ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿಯಿತು.

ಇಷ್ಟೆಲ್ಲ ಬೆಳವಣಿಗೆಗಳಿಗೆ ಸಾಕ್ಷಿಯಾದ ಈ ವರ್ಷ, ಭಾರತೀಯರು ಹೆಚ್ಚಾಗಿ ಸರ್ಚ್ ಮಾಡಿದ್ದು ಯಾವ ಕ್ರೀಡಾಪಟುಗಳ ಬಗ್ಗೆ ಎಂಬ ಪಟ್ಟಿಯನ್ನು ಗೂಗಲ್ ಪ್ರಕಟಿಸಿದೆ.
.ಪಾಕಿಸ್ತಾನದಲ್ಲಿ ಹೆಚ್ಚು ಜನ ಗೂಗಲ್ನಲ್ಲಿ ಸರ್ಚ್ ಮಾಡಿದ್ದು ಭಾರತದ ಆಟಗಾರನಿಗಾಗಿ!.ODI Ranking: ರೋಹಿತ್ ಹಿಂದಿಕ್ಕಿ ಮತ್ತೆ ಅಗ್ರಸ್ಥಾನಕ್ಕೇರುವರೇ 'ಕಿಂಗ್' ಕೊಹ್ಲಿ?.
ಈ ಲಿಸ್ಟ್ನಲ್ಲಿ ವೈಭವ್ ಸೂರ್ಯವಂಶಿ ಅಗ್ರಸ್ಥಾನದಲ್ಲಿದ್ದಾರೆ. ಮಹಿಳಾ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ನಲ್ಲಿ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಜೆಮಿಮಾ ರಾಡ್ರಿಗಸ್ ಅವರೂ ಅಗ್ರ ಹತ್ತರಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತದಲ್ಲಿ ಹೆಚ್ಚು ಸರ್ಚ್ ಆದ ಕ್ರೀಡಾಳುಗಳು

ವೈಭವ್ ಸೂರ್ಯವಂಶಿ

ಪ್ರಿಯಾಂಶ್ ಆರ್ಯ

ಅಭಿಷೇಕ್ ಶರ್ಮಾ

ಶೈಕ್ ರಶೀದ್

ಜೆಮಿಮಾ ರಾಡ್ರಿಗಸ್

ಆಯಷ್ ಮ್ಹಾತ್ರೆ

ಸ್ಮೃತಿ ಮಂದಾನ

ಕರುಣ್ ನಾಯರ್

ಉರ್ವಿಲ್ ಪಟೇಲ್

ವಿಗ್ನೇಶ್ ಪುತ್ತೂರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.