ಭಾರತದ ಸಾಕಷ್ಟು ಯುವ ಆಟಗಾಗರು ಈ ವರ್ಷ ಕ್ರಿಕೆಟ್ ಲೋಕದಲ್ಲಿ ಮಿಂಚಿದ್ದಾರೆ. ಅವರಲ್ಲಿ ಕೆಲವರು ದೇಶದಲ್ಲಷ್ಟೆ ಅಲ್ಲದೆ, ವಿಶ್ವದಾದ್ಯಂತ ಸಂಚಲನ ಮೂಡಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವೆ 2025ರಲ್ಲಿ ಕೇವಲ ನಾಲ್ಕು ಕ್ರಿಕೆಟ್ ಪಂದ್ಯಗಳಷ್ಟೇ ನಡೆದಿವೆ. ಏಕದಿನ ಮಾದರಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡಿದ ಒಂದು ಪಂದ್ಯ ಮತ್ತು ಟಿ20 ಮಾದರಿಯಲ್ಲಿ ಆಡಿದ ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್ ಸೇರಿದಂತೆ ಮೂರು ಪಂದ್ಯಗಳಲ್ಲೂ ಭಾರತ ಗೆದ್ದಿದೆ.

ಏಷ್ಯಾಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಗರಿಷ್ಠ ರನ್ ಸ್ಕೋರರ್ ಎನಿಸಿದ್ದ ಟೀಂ ಇಂಡಿಯಾದ ಎಡಗೈ ಬ್ಯಾಟರ್ ಅಭಿಷೇಕ್ ಶರ್ಮಾ, 44.85ರ ಸರಾಸರಿ, 200ರ ಸ್ಟ್ರೈಕ್ರೇಟ್ನಲ್ಲಿ 314 ರನ್ ಕಲೆಹಾಕಿದ್ದರು. ಅದರೊಂದಿಗೆ, ಸರಣಿ ಶ್ರೇಷ್ಠ ಎನಿಸಿದ್ದರು.

ಪಾಕ್ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ 13 ಎಸೆತಗಳಲ್ಲೇ 31 ರನ್ ಮತ್ತು 'ಸೂಪರ್ 4' ಸುತ್ತಿನಲ್ಲಿ 39 ಎಸೆತಗಳಲ್ಲಿ 74 ರನ್ ಬಾರಿಸಿದ್ದ ಶರ್ಮಾ, ಪಾಕ್ ಪಾಳೆಯದಲ್ಲಿ ಭೀತಿ ಸೃಷ್ಟಿಸಿದ್ದರು. ಆದರೆ, ಫೈನಲ್ನಲ್ಲಿ ಹೆಚ್ಚು ರನ್ ಗಳಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಕೇವಲ 5 ರನ್ಗೆ ಔಟಾಗಿದ್ದರು.
.ಭಾರತೀಯರು ಹೆಚ್ಚು ಸರ್ಚ್ ಮಾಡಿದ ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿಗಿಲ್ಲ ಸ್ಥಾನ!.ODI Ranking: ರೋಹಿತ್ ಹಿಂದಿಕ್ಕಿ ಮತ್ತೆ ಅಗ್ರಸ್ಥಾನಕ್ಕೇರುವರೇ 'ಕಿಂಗ್' ಕೊಹ್ಲಿ?.
ತಮ್ಮ ತಂಡದ ವಿರುದ್ಧ ಅಬ್ಬರಿಸಿದ್ದ ಅಭಿಷೇಕ್ ಶರ್ಮಾ ಅವರ ಬಗ್ಗೆ ತಿಳಿಯಲು ಪಾಕ್ ಮಂದಿ, ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ಇದೇ ಕಾರಣಕ್ಕೆ ಅವರು, ಪಾಕಿಸ್ತಾನದಲ್ಲಿ 2025ರಲ್ಲಿ ಗೂಗಲ್ನಲ್ಲಿ ಅತಿಹೆಚ್ಚು ಸರ್ಚ್ ಆದ ಕ್ರೀಡಾಪಟು ಎನಿಸಿದ್ದಾರೆ.

ಪಾಕಿಸ್ತಾನದಲ್ಲಿ ಅತಿ ಹೆಚ್ಚು ಸರ್ಚ್ ಆದ ಕ್ರೀಡಾಪಟು

ಅಭಿಷೇಕ್ ಶರ್ಮಾ: ಭಾರತದ ಕ್ರಿಕೆಟಿಗ

ಹಸನ್ ನವಾಜ್: ಪಾಕಿಸ್ತಾನದ ಕ್ರಿಕೆಟಿಗ

ಇರ್ಫಾನ್ ಖಾನ್ ನಿಯಾಜ್: ಪಾಕಿಸ್ತಾನದ ಕ್ರಿಕೆಟಿಗ

ಸಹಿಬಝಾದ್ ಫರ್ಹಾನ್: ಪಾಕಿಸ್ತಾನದ ಕ್ರಿಕೆಟಿಗ

ಮುಹಮ್ಮದ್ ಅಬ್ಬಾಸ್: ಪಾಕಿಸ್ತಾನದ ಕ್ರಿಕೆಟಿಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.