ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್: ಬೋಗಿಗಳು ಇಲ್ಲದೆ ಮೂರು ಕಿ.ಮೀ ಚಲಿಸಿದ ರೈಲ್ವೆ ಎಂಜಿನ್

Published 5 ಮೇ 2024, 9:29 IST
Last Updated 5 ಮೇ 2024, 9:29 IST
ಅಕ್ಷರ ಗಾತ್ರ

ಲೂಧಿಯಾನ: ಜಮ್ಮುವಿಗೆ ತೆರಳಬೇಕಿದ್ದ ರೈಲೊಂದರ ಬೋಗಿಗಳು ಎಂಜಿನ್ನಿಂದ ಬೇರ್ಪಟ್ಟ ಘಟನೆ ಪಂಜಾಬ್‌ನ ಸರ್‌ಹಿಂದ್‌ನಲ್ಲಿ ಭಾನುವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರ್‌ಹಿಂದ್ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಬೋಗಿಗಳು ಇಲ್ಲದೆ ಎಂಜಿನ್‌ ಸುಮಾರು ಮೂರು ಕಿಲೋ ಮೀಟರ್ ದೂರ ಚಲಿಸಿದೆ ಎಂದು ಅವರು ತಿಳಿಸಿದ್ದಾರೆ.

ದೆಹಲಿ–ಕತ್ರಾ ರೈಲ್ವೆ ಮಾರ್ಗದಲ್ಲಿ ಕೆಲಸನಿರತ ಕೀಮ್ಯಾನ್ ಒಬ್ಬರು ಬೋಗಿಗಳು ಇಲ್ಲದೆ ಎಂಜಿನ್ ಚಲಿಸುತ್ತಿರುವುದನ್ನು ಲೋಕೊ ಪೈಲಟ್‌ ಗಮನಕ್ಕೆ ತಂದರು. ಬಳಿಕ ಎಂಜಿನ್ ಹಿಂದಿರುಗಿ ಬಂದಿದೆ. ನಂತರ ಬೋಗಿಗಳನ್ನು ಜೋಡಿಸಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.

ಎಂಜಿನ್‌ನೊಂದಿಗೆ ಬೋಗಿಗಳನ್ನು ಸಡಿಲವಾಗಿ ಜೋಡಿಸಿದ್ದರಿಂದ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಸಲಾಗುವುದು ಎಂದು ಉತ್ತರ ರೈಲ್ವೆ ವಲಯದ ವಿಭಾಗೀಯ ವ್ಯವಸ್ಥಾಪಕ ನವೀನ್ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT