ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರ ರಾಜಕಾರಣ: ಪ್ರದೇಶವಾರು ಸಮೀಕರಣ

Published 4 ಡಿಸೆಂಬರ್ 2023, 3:19 IST
Last Updated 4 ಡಿಸೆಂಬರ್ 2023, 3:19 IST
ಅಕ್ಷರ ಗಾತ್ರ

ನವದೆಹಲಿ: ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶವು, ದೇಶದ ರಾಜಕಾರಣದಲ್ಲಿನ ಪ್ರದೇಶವಾರು ಸಮೀಕರಣವನ್ನು ಮತ್ತಷ್ಟು ನಿಚ್ಚಳಗೊಳಿಸಿದೆ. ಮಧ್ಯ ಭಾರತ, ಉತ್ತರ ಭಾರತದ ಕೆಲವು ರಾಜ್ಯಗಳು ಮತ್ತು ಪಶ್ಚಿಮದ ರಾಜ್ಯಗಳಲ್ಲಿ ಈಗ ಬಿಜೆಪಿ ಅಧಿಕಾರದಲ್ಲಿದೆ. ಇಲ್ಲಿ ಬಿಜೆಪಿಯೇ ಅತ್ಯಂತ ಪ್ರಬಲ ಪಕ್ಷ ಎನಿಸಿದೆ. ಈ ರಾಜ್ಯಗಳಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿ ಇಲ್ಲದಿದ್ದರೂ, ಬಿಜೆಪಿಗೆ ಪೈಪೋಟಿ ನೀಡುವ ಸಾಮರ್ಥ್ಯವಿರುವ ಮತ್ತು ಅತ್ಯಂತ ದೊಡ್ಡ ವಿರೋಧ ಪಕ್ಷ ಎನಿಸಿದೆ.

ದಕ್ಷಿಣ ಮತ್ತು ಪೂರ್ವದ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಪ್ರಾಬಲ್ಯ. ಕರ್ನಾಟಕದಲ್ಲಷ್ಟೇ ಉತ್ತಮ ನೆಲೆ ಹೊಂದಿದ್ದ ಕಾಂಗ್ರೆಸ್‌ ಈಗ, ಪ್ರಾದೇಶಿಕ ಪಕ್ಷವಾದ ಬಿಆರ್‌ಎಸ್‌ ಅನ್ನು ತೆಲಂಗಾಣದಲ್ಲಿ ಅಧಿಕಾರದಿಂದ ಹೊರದಬ್ಬಿದೆ. ಬಿಹಾರದಲ್ಲಿ ಜೆಡಿಯು ಮತ್ತು ಆರ್‌ಜೆಡಿ, ಜಾರ್ಖಂಡ್‌ನಲ್ಲಿ ಜೆಎಂಎಂ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌, ಒಡಿಶಾದಲ್ಲಿ ಬಿಜೆಡಿ, ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರದಲ್ಲಿವೆ. ಕೇರಳದಲ್ಲಿ ಎಡಪಕ್ಷಗಳ ಎಲ್‌ಡಿಎಫ್ ಸರ್ಕಾರವಿದೆ.

ಈ ಹೊತ್ತಿನ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳು ಇರುವ ರಾಜ್ಯಗಳಲ್ಲಿ ಅವು ಸ್ವತಂತ್ರವಾಗಿ ಅಥವಾ ಮೈತ್ರಿಕೂಟದ ಭಾಗವಾಗಿ ಅಧಿಕಾರದಲ್ಲಿವೆ. ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯವಿಲ್ಲದ ಮತ್ತು ಪ್ರಾದೇಶಿಕ ಪಕ್ಷಗಳು ಪ್ರಾಬಲ್ಯ ಕಳೆದುಕೊಂಡ (ಉತ್ತರ ಪ್ರದೇಶ) ರಾಜ್ಯಗಳಲ್ಲಿ ಬಿಜೆಪಿ ಈಗ ಮೇಲುಗೈ ಸಾಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT