ನವದೆಹಲಿ: ‘ಕರ್ನಾಟಕದ ಲೋಕಸಭಾ ಕ್ಷೇತ್ರವೊಂದರಲ್ಲಿ ದೊಡ್ಡ ಪ್ರಮಾಣದಲ್ಲಿ ಚುನಾವಣಾ ಅಕ್ರಮ ನಡೆದಿದೆ. ಈ ಭಯಂಕರ ಮತ ಕಳ್ಳತನದ ‘ಕಾರ್ಯ ವಿಧಾನ’ವನ್ನು ಶೀಘ್ರದಲ್ಲೇ ಯಥಾವತ್ತಾಗಿ ಚುನಾವಣಾ ಆಯೋಗ ಮತ್ತು ಜನರ ಮುಂದಿಡುತ್ತೇವೆ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದರು.

ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ಕರ್ನಾಟಕದಲ್ಲಿ ಒಂದು ಲೋಕಸಭಾ ಕ್ಷೇತ್ರವನ್ನು ಆಯ್ದುಕೊಂಡು ಆಳವಾದ ಅಧ್ಯಯನ ನಡೆಸಿದೆವು. ಇಡೀ ಕ್ಷೇತ್ರದ ಮತದಾರರ ಪಟ್ಟಿಯನ್ನು (ಡಿಜಿಟಲ್) ತೆಗೆದುಕೊಂಡು ಅದನ್ನು ವಿಶ್ಲೇಷಣೆಗೆ ಒಳಪಡಿಸಿದೆವು. ಇದಕ್ಕೆ 6 ತಿಂಗಳು ಸಮಯ ಬೇಕಾಯಿತು. ಈ ವಿಶ್ಲೇಷಣೆಯ ಮೂಲಕ, ‘ಅವರು’ ಮತದಾರರ ಪಟ್ಟಿಯಲ್ಲಿ ಹೇಗೆ ಅಕ್ರಮ ಎಸಗುತ್ತಾರೆ, ಹೊಸ ಮತದಾರರನ್ನು ಹೇಗೆ ಸೇರ್ಪಡೆ ಮಾಡುತ್ತಾರೆ, ಅವರನ್ನು ಎಲ್ಲಿಂದ ಕರೆತರುತ್ತಾರೆ ಎಂಬುದು ಸೇರಿದಂತೆ ‘ಅವರ’ ಮತ ಕಳ್ಳತನದ ಸಂಪೂರ್ಣ ಕಾರ್ಯ ವಿಧಾನವನ್ನೇ ತಿಳಿದುಕೊಂಡಿದ್ದೇವೆ’ ಎಂದರು.

ಈ ಕುರಿತು ತಮ್ಮ ‘ಎಕ್ಸ್’ ಖಾತೆಯಲ್ಲೂ ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದಾರೆ. ಆದರೆ, ಕರ್ನಾಟಕದ ಯಾವ ಲೋಕಸಭಾ ಕ್ಷೇತ್ರವನ್ನು ಆಯ್ದುಕೊಂಡು ಅಧ್ಯಯನ ನಡೆಸಲಾಗಿದೆ ಎನ್ನುವುದನ್ನು ಬಹಿರಂಗಪಡಿಸಿಲ್ಲ.

‘ಅವರ’ ಆಟವನ್ನು ಕಾಂಗ್ರೆಸ್ ತಿಳಿದುಕೊಂಡಿದೆ ಎನ್ನುವುದು ಈಗ ಚುನಾವಣಾ ಆಯೋಗಕ್ಕೂ ಗೊತ್ತಾಗಿದೆ. ಹೀಗಾಗಿಯೇ ‘ಎಸ್ಐಆರ್’ ಮೂಲಕ ಬಿಹಾರದಲ್ಲಿ ಮತದಾರರ ಪಟ್ಟಿಯಿಂದ ಹೆಸರನ್ನು ಅಳಿಸಿ ಹಾಕುವ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಭಾರತದಲ್ಲಿ ಇಡೀ ಚುನಾವಣೆಯನ್ನೇ ಕದಿಯಲಾಗುತ್ತಿದೆ. ಇದು ಭಾರತದ ವಾಸ್ತವ’ ಎಂದ ರಾಹುಲ್ ಗಾಂಧಿ, ‘ಎಸ್ಐಆರ್’ ವಿರುದ್ಧ ಸಂಸತ್ತಿನ ಒಳಗೆ ಮತ್ತು ಹೊರೆಗೆ ಹೋರಾಟ ನಡೆಸಲಾಗುವುದು’ ಎಂದರು.

ಬಿಹಾರದಲ್ಲಿ ’ಎಸ್ಐಆರ್’ ಹೆಸರಿನಲ್ಲಿ ಎಸ್.ಸಿ ಎಸ್.ಟಿ ಒಬಿಸಿ ಮತ್ತು ಅಲ್ಪಸಂಖ್ಯಾತ ಸಹೋದರ–ಸಹೋದರಿಯರ ಮತಗಳನ್ನು ಕದಿಯಲಾಗಿದೆ. ನಾವು ಕೈ ಕಟ್ಟಿಕೊಂಡು ಸಮ್ಮನೆ ಕೂರುವುದಿಲ್ಲ.
– ರಾಹುಲ್ ಗಾಂಧಿ, ಲೋಕಸಭೆಯ ವಿರೋಧ ಪಕ್ಷದ ನಾಯಕ

ಕಿವಿಗೊಡದ ಚುನಾವಣಾ ಆಯೋಗ

‘ಮಹಾರಾಷ್ಟ್ರದ ಚುನಾವಣೆಗೆ ಸಂಬಂಧಿಸಿದಂತೆ ನಾವು ಚುನಾವಣಾ ಆಯೋಗದ ಬಳಿ ಮತದಾರರ ಪಟ್ಟಿ ಕೇಳಿದ್ದೆವು ಮತದಾನದ ದಿನದ ವಿಡಿಯೊ ಚಿತ್ರೀಕರಣದ ದಾಖಲೆ ನೀಡುವಂತೆಯೂ ಮನವಿ ಮಾಡಿದ್ದೆವು. ಆದರೆ ಆಯೋಗವು ನಮ್ಮ ಮನವಿಗೆ ಕಿವಿಗೊಡಲಿಲ್ಲ. ಮಾಹಿತಿ ನೀಡಲು ನಿರಾಕರಿಸಿದ್ದಲ್ಲದೆ ಇದಕ್ಕೆ ಸಂಬಂಧಿಸಿದ ನಿಯಮಗಳನ್ನೇ ಬದಲಿಸಿತು’ ಎಂದು ರಾಹುಲ್ ಗಾಂಧಿ ದೂರಿದರು.

‘ಮಹಾರಾಷ್ಟ್ರದಲ್ಲಿ ಮತದಾರರ ಪಟ್ಟಿಯಲ್ಲಿ ಸುಮಾರು ಒಂದು ಕೋಟಿಯಷ್ಟು ಹೊಸ ಮತದಾರರು ಸೇರ್ಪಡೆಗೊಂಡರು. ಬಿಹಾರದಲ್ಲಿ ಮನೆ ಭೇಟಿಯ ವೇಳೆ ವಿಳಾಸದಲ್ಲಿ ಲಭ್ಯವಿಲ್ಲದ 52 ಲಕ್ಷ ಮತದಾರರನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಪಟ್ಟಿಯಲ್ಲಿ ಇದ್ದವರಲ್ಲಿ 18 ಲಕ್ಷ ಮತದಾರರು ಮೃತಪಟ್ಟಿರುವ ಅಂಶವೂ ಪರಿಷ್ಕರಣೆ ವೇಳೆ ಗಮನಕ್ಕೆ ಬಂದಿದೆ. ಈ ವಿಷಯ ಬಿಹಾರಕ್ಕೆ ಸೀಮಿತವಲ್ಲ. ಈ ಸಂಖ್ಯೆ ಕೇವಲ 52 ಲಕ್ಷವೂ ಅಲ್ಲ. ಮಹಾರಾಷ್ಟ್ರದಲ್ಲೂ ಅವರು ಈ ರೀತಿಯಲ್ಲೇ ಅಕ್ರಮ ಎಸಗಿದ್ದಾರೆ. ದೇಶದಲ್ಲಿ ‘ಮತ ಕಳ್ಳತನ’ ಹೇಗೆ ನಡೆಯುತ್ತಿದೆ ಎನ್ನುವುದನ್ನು ಇದು ಹೇಳುತ್ತದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.