ತೂತುಕುಡಿ: ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂ. ಕೆ ಸ್ಟಾಲಿನ್ ತೂತುಕುಡಿಯ ಸ್ಥಳೀಯ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿ ಪ್ರಚಾರ ನಡೆಸಿದರು.

ಇಂದು (ಮಂಗಳವಾರ) ಬೆಳಿಗ್ಗೆ ಮಾರುಕಟ್ಟೆಗೆ ಭೇಟಿ ನೀಡಿದ ಸ್ಟಾಲಿನ್, ಜನರು ಹಾಗೂ ತರಕಾರಿ ಮಾರಾಟಗಾರರೊಂದಿಗೆ ಮಾತುಕತೆ ನಡೆಸಿ ಹಲವರ ಜತೆ ಸೆಲ್ಫಿಗೆ ಪೋಸ್ ನೀಡಿದರು. ಇನ್ನೂ ಕೆಲವು ಜನರೊಂದಿಗೆ ಹಸ್ತಲಾಘವ ಮಾಡಿದರು.

ಪ್ರಚಾರದ ವೇಳೆ ಸ್ಟಾಲಿನ್ ಸಹೋದರಿ, ಸ್ಥಳೀಯ ಸಂಸದೆ ಕನಿಮೊಳಿ, ರಾಜ್ಯ ಸಚಿವರಾದ ಅನಿತಾ ಆರ್. ರಾಧಾಕೃಷ್ಣನ್ ಮತ್ತು ಗೀತಾ ಜೀವನ್ ಜೊತೆಗಿದ್ದರು.

ಸೋಮವಾರ ಸಂಜೆ ನೆರೆಯ ತಿರುನಲ್ವೇಲಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಸ್ಟಾಲಿನ್, 2023ರ ಡಿಸೆಂಬರ್‌ನಲ್ಲಿ ಸಂಭವಿಸಿದ ಪ್ರವಾಹದ ಹಿನ್ನೆಲೆಯಲ್ಲಿ ₹37 ಸಾವಿರ ಕೋಟಿ ಪರಿಹಾರ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಇದರ ವಿರುದ್ಧ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಲಿದೆ ಎಂದು ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.