ನವದೆಹಲಿ: ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಲೋಕಪಾಲ ಅಂದಾಜು ₹5 ಕೋಟಿ ಮೌಲ್ಯದ ಏಳು ಐಷಾರಾಮಿ ಬಿಎಂಡಬ್ಲ್ಯು ಕಾರುಗಳನ್ನು ಖರೀದಿಸುವ ವಿವಾದಾತ್ಮಕ ಟೆಂಡರ್ ಅನ್ನು ಎರಡು ತಿಂಗಳ ನಂತರ ರದ್ದುಗೊಳಿಸಿದೆ.

ಬಿಎಂಡಬ್ಲ್ಯು 3 ಸರಣಿಯ 330ಎಲ್ಐ ಮಾದರಿಯ ಕಾರುಗಳ ಪೂರೈಕೆಗಾಗಿ ಪ್ರತಿಷ್ಠಿತ ಏಜೆನ್ಸಿಗಳಿಂದ ಅಕ್ಟೋಬರ್ 16ರಂದು ಬಿಡ್ಗಳನ್ನು ಆಹ್ವಾನಿಸಿತ್ತು. ದುಬಾರಿ ಬೆಲೆಯ ವಾಹನಗಳ ಖರೀದಿ ನಿರ್ಧಾರವನ್ನು ವಿರೋಧ ಪಕ್ಷಗಳು ಮತ್ತು ನಾಗರಿಕರು ಟೀಕಿಸಿದ್ದರು.

‘ಲೋಕಪಾಲ ಸಂಸ್ಥೆಯು ಖರೀದಿ ಪ್ರಸ್ತಾಪವನ್ನು ರದ್ದುಗೊಳಿಸುವ ನಿರ್ಧಾರ ತೆಗೆದುಕೊಂಡಿದ್ದು, ಡಿಸೆಂಬರ್ 16ರಂದು ಆದೇಶ ಹೊರಡಿಸಲಾಗಿದೆ’ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಲೋಕಪಾಲದ ಮುಖ್ಯಸ್ಥರು ಮತ್ತು ಆರು ಸದಸ್ಯರಿಗೆ ತಲಾ ಒಂದು ವಾಹನವನ್ನು ಒದಗಿಸುವ ಉದ್ದೇಶವಿತ್ತು. ಪ್ರಸ್ತುತ ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಲೋಕಪಾಲ ಮುಖ್ಯಸ್ಥರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.