ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾವಾಗ ಮದುವೆ ಆಗುತ್ತೀರಿ...?: ಕಾಶ್ಮೀರದಲ್ಲೂ ರಾಹುಲ್‌ಗೆ ಎದುರಾದ ಪ್ರಶ್ನೆ

Published : 26 ಆಗಸ್ಟ್ 2024, 16:25 IST
Last Updated : 26 ಆಗಸ್ಟ್ 2024, 16:25 IST
ಫಾಲೋ ಮಾಡಿ
Comments

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿವಾಹ ಕುರಿತ ಪ್ರಶ್ನೆ ಮತ್ತೆ ಮತ್ತೆ ಎದುರಾಗುತ್ತಲೇ ಇದೆ. ಈ ಬಾರಿ ಕಾಶ್ಮಿರದ ವಿದ್ಯಾರ್ಥಿನಿಯರು 54 ವರ್ಷದ ರಾಹುಲ್ ಅವರನ್ನು ಈ ಪ್ರಶ್ನೆ ಕೇಳಿದ್ದಾರೆ. 

ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದ ತುಣುಕು ಯುಟ್ಯೂಬ್ ಮೂಲಕ ಸೋಮವಾರ ಪ್ರಸಾರಗೊಂಡಿದೆ. 

ವಿದ್ಯಾರ್ಥಿನಿಯರ ಇಕ್ಕಟ್ಟಿನ ಪ್ರಶ್ನೆಗೆ ಉತ್ತರಿಸಿದ ರಾಹುಲ್, ‘ಮದುವೆಯಾಗು ಎಂಬ ಒತ್ತಡವನ್ನು 20ರಿಂದ 30 ವರ್ಷಗಳ ಕಾಲ ಅನುಭವಿಸಿದ್ದೇನೆ’ ಎಂದಿದ್ದಾರೆ.

ಹಾಗಿದ್ದರೆ ಮದುವೆಯಾಗುವ ಯೋಜನೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್, ‘ನಾನೇನೂ ಯೋಜನೆ ರೂಪಿಸುವುದಿಲ್ಲ. ಆದರೆ ಅದಾಗಿಯೇ ಆದರೆ...’ ಎಂದು ಮೌನಕ್ಕೆ ಶರಣಾದರು. 

‘ಹಾಗಿದ್ದರೆ ನಮ್ಮನ್ನು ಕರೆಯಲು ಮರೆಯಬೇಡಿ’ ಎಂದು ವಿದ್ಯಾರ್ಥಿನಿಯರು ಒಕ್ಕೊರಲಿನ ಮನವಿ ಮಾಡಿದರು. 

ಇದೇ ರೀತಿಯ ಪ್ರಶ್ನೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಾಯ್‌ಬರೇಲಿಯಲ್ಲೂ ರಾಹುಲ್‌ಗೆ ಎದುರಾಗಿತ್ತು. ಆ ಪ್ರಶ್ನೆಗೆ ಉತ್ತರಿಸುವಂತೆ ರಾಹುಲ್ ಸೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಬಹಿರಂಗವಾಗಿಯೇ ಹೇಳಿದ್ದರು. 

ಆಗ ಪ್ರತಿಕ್ರಿಯಿಸಿದ್ದ ರಾಹುಲ್, ‘ಬಹುಬೇಗ ಮದುವೆ ಆಗಲೇಬೇಕಾಗಿದೆ’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT