ನ್ಯೂಯಾರ್ಕ್/ವಾಷಿಂಗ್ಟನ್: ಅಮೆರಿಕದ ಮದ್ಯ ಮತ್ತು ಕೃಷಿ ಉತ್ಪನ್ನಗಳ ಮೇಲಿನ ಸುಂಕವನ್ನು ಉಲ್ಲೇಖಿಸಿ, ಭಾರತವು ತನ್ನ ಸರಕುಗಳ ಮೇಲೆ ಅಧಿಕ ಸುಂಕ ವಿಧಿಸುತ್ತಿದೆ ಎಂದು ಅಮೆರಿಕ ಮತ್ತೊಮ್ಮೆ ಧ್ವನಿ ಎತ್ತಿದೆ.

ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೋಲಿನ್ ಲೆವಿಟ್ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಕೆನಡಾದ ಕುರಿತ ಪ್ರಶ್ನೆಗೆ ಉತ್ತರಿಸುವಾಗ, ಭಾರತ ವಿಧಿಸುತ್ತಿರುವ ಹೆಚ್ಚಿನ ಸುಂಕದ ಬಗ್ಗೆಯೂ ಉಲ್ಲೇಖಿಸಿದ್ದಾರೆ.

‘ಅಮೆರಿಕದ ಮದ್ಯದ ಮೇಲೆ ಭಾರತ ಶೇ 150ರಷ್ಟು ಸುಂಕ ವಿಧಿಸುತ್ತಿದೆ. ಇದು ಕೆಂಟುಕಿ ಬರ್ಬನ್ ಅನ್ನು ಭಾರತಕ್ಕೆ ರಫ್ತು ಮಾಡಲು ನೆರವಾಗುತ್ತದೆಯೆ, ಖಂಡಿತವಾಗಿಯೂ ಇಲ್ಲ. ನಮ್ಮ ಕೃಷಿ ಉತ್ಪನ್ನದ ಮೇಲೂ ಭಾರತ ಶೇ 100 ಸುಂಕ ವಿಧಿಸುತ್ತಿದೆ. ಜಪಾನ್ ಕೂಡ ಅಕ್ಕಿಗೆ ಶೇ 700ರಷ್ಟು ಸುಂಕ ವಿಧಿಸುತ್ತಿದೆ. ಅಮೆರಿಕದ ಚೀಸ್ ಮತ್ತು ಬೆಣ್ಣೆಗೆ ಕೆನಡಾವು ಶೇ 300ರಷ್ಟು ಸುಂಕ ವಿಧಿಸುತ್ತಿದೆ’ ಎಂದು ಲೆವಿಟ್ ಹೇಳಿದರು.

ಭಾರತ, ಕೆನಡಾ ಮತ್ತು ಜಪಾನ್ ವಿಧಿಸುತ್ತಿರುವ ಸುಂಕಗಳ ವಿವರ ತೋರಿಸುವ ಪಟ್ಟಿಯನ್ನು ಅವರು ಪ್ರದರ್ಶಿಸಿದರು.

‘ಅಮೆರಿಕದ ವ್ಯಾಪಾರ ಮತ್ತು ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸುವ ಅಧ್ಯಕ್ಷರನ್ನು ನಾವು ಈಗ ಹೊಂದಿದ್ದೇವೆ. ಅಧ್ಯಕ್ಷ ಟ್ರಂಪ್ ಪರಸ್ಪರ ಸಂಬಂಧವನ್ನು ನಂಬುತ್ತಾರೆ. ಅವರು ಕೇಳುತ್ತಿರುವುದು ನ್ಯಾಯಯುತ ಮತ್ತು ಸಮತೋಲಿತ ವ್ಯಾಪಾರ ಪದ್ಧತಿಗಳನ್ನು. ದುರದೃಷ್ಟವಶಾತ್, ಈ ವಿಷಯದಲ್ಲಿ ಕೆನಡಾ ಕಳೆದ ಹಲವು ದಶಕಗಳಿಂದ ನಮ್ಮನ್ನು ನ್ಯಾಯಯುತವಾಗಿ ನಡೆಸಿಕೊಳ್ಳುತ್ತಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.