ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪನ್ನೂ ಹತ್ಯೆಗೆ ಸಂಚು: ತನಿಖಾ ಫಲಿತಾಂಶದ ನಿರೀಕ್ಷೆ –ಅಮೆರಿಕ

Published 27 ಜೂನ್ 2024, 14:08 IST
Last Updated 27 ಜೂನ್ 2024, 14:08 IST
ಅಕ್ಷರ ಗಾತ್ರ

ವಾಷಿಂಗ್ಟನ್: ‘ಸಿಖ್‌ ಪ್ರತ್ಯೇಕತಾವಾದಿ ನಾಯಕ ಗುರ್‌ಪತ್ವಂತ್ ಸಿಂಗ್ ಪನ್ನೂ ಹತ್ಯೆಗೆ ನಡೆಸಿದ್ದ ಸಂಚಿನಲ್ಲಿ ಭಾರತದ ಅಧಿಕಾರಿಯೊಬ್ಬರ ಪಾತ್ರವಿದೆ ಎಂಬ ಆರೋಪದ ಬಗ್ಗೆ ಭಾರತ ಕೈಗೊಂಡಿರುವ ತನಿಖೆ ವಿವರಗಳನ್ನು ನಿರೀಕ್ಷಿಸುತ್ತಿದ್ದೇವೆ’ ಎಂದು ಅಮೆರಿಕ ಹೇಳಿದೆ.

ನ್ಯೂಯಾರ್ಕ್‌ನಲ್ಲಿ ಪನ್ನೂ ಹತ್ಯೆಗೆ ನಡೆದಿದ್ದ ಸಂಚಿನ ಕುರಿತು ಭಾರತೀಯ ಪ್ರಜೆ ನಿಖಿಲ್‌ ಗುಪ್ತಾ ಎಂಬಾತ ಭಾರತದ ಅಧಿಕಾರಿಯೊಬ್ಬರ ಜೊತೆಗೂಡಿ ಕೆಲಸ ಮಾಡುತ್ತಿದ್ದ ಎಂದು ಕಳೆದ ನವೆಂಬರ್‌ನಲ್ಲಿ ಅಮೆರಿಕದ ಒಕ್ಕೂಟದ ಅಧಿಕಾರಿಯೊಬ್ಬರು ಆರೋಪಿಸಿದ್ದರು.

ಭಯೋತ್ಪಾದನೆಯ ಆರೋಪವಿದ್ದ ಪನ್ನೂ ಅಮೆರಿಕ ಮತ್ತು ಕೆನಡಾದ ಪೌರತ್ವವನ್ನು ಹೊಂದಿದ್ದ. ಜೆಕ್‌ ರಿ‌ಪಬ್ಲಿಕ್‌ನಲ್ಲಿ ಕಳೆದ ವರ್ಷ ಜೂನ್‌ನಲ್ಲಿ ಗುಪ್ತಾನನ್ನು ಬಂಧಿಸಲಾಗಿದ್ದು, ಜೂನ್‌ 14ರಂದು ಅಮೆರಿಕದ ಅಧಿಕಾರಿಗಳಿಗೆ ಒಪ್ಪಿಸಲಾಗಿತ್ತು.

‘ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಭಾರತದ ಅಧಿಕಾರಿಗಳು ತಿಳಿಸಿದ್ದಾರೆ. ನಾವು ತನಿಖೆಯ ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ’ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಅವರು ಬುಧವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಅಮೆರಿಕದ ಆರೋಪ ಕುರಿತಂತೆ ತನಿಖೆಯನ್ನು ನಡೆಸಲು ಭಾರತ ಸರ್ಕಾರವು ಉನ್ನತಾಧಿಕಾರ ತನಿಖಾ ಸಮಿತಿಯನ್ನು ರಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT