ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲವ್ ಜಿಹಾದ್: ಗುಜರಾತ್‌ನಲ್ಲಿ ಹಿಂದು ಕುಟುಂಬದ ವಿರುದ್ಧ ದೂರು ದಾಖಲು

ಅರ್ಬಾಜ್‌ಖಾನ್ ಪಠಾಣ್ ಎಂಬವರು ವಡೋದರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Published : 5 ಏಪ್ರಿಲ್ 2021, 5:46 IST
ಫಾಲೋ ಮಾಡಿ
Comments

ಅಹಮದಾಬಾದ್:'ಗುಜರಾತ್ ಧಾರ್ಮಿಕ ಸ್ವಾತಂತ್ರ ಕಾಯ್ದೆ-2003'ಕ್ಕೆ ತಿದ್ದುಪಡಿ ಮಸೂದೆಯೊಂದನ್ನು ಅಲ್ಲಿನ ವಿಧಾನಸಭೆಯಲ್ಲಿ ಅನುಮೋದಿಸಿದ ಬೆನ್ನಲ್ಲೇ ಹಿಂದು ಕುಟುಂಬವೊಂದರ ವಿರುದ್ಧ ಲವ್ ಜಿಹಾದ್ ಪ್ರಕರಣ ದಾಖಲಾಗಿದೆ.

ಅರ್ಬಾಜ್‌ಖಾನ್ ಪಠಾಣ್ ಎಂಬವರು ಕಲ್ಪೇಶ್ ಚೌಹಾಣ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ವಡೋದರಾದ ಜೆ.ಪಿ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

'ನನ್ನ ತಂಗಿಯನ್ನು ಮದುವೆಯಾಗುವ ಆಮಿಷವೊಡ್ಡಿ, ಧಾರ್ಮಿಕವಾಗಿ ಮತಾಂತರ ಮಾಡುವ ಉದ್ದೇಶ ಹೊಂದಿದ್ದಾರೆ. ಅಲ್ಲದೆ, ಉತ್ತಮ ಜೀವನ, ಹಣಕಾಸಿನ ಆಸೆ ತೋರಿಸಿ ಮರುಳು ಮಾಡಲಾಗಿದೆ,' ಎಂದು ದೂರುದಾರರು ತಿಳಿಸಿದ್ದಾರೆ. ಅಲ್ಲದೆ, ಹೊಸ ತಿದ್ದುಪಡಿ ಮಸೂದೆ ಅನ್ವಯ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಪೊಲೀಸರನ್ನು ಕೇಳಿಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಲ್ಪೇಶ್ ಚೌಹಾಣ್, 'ದೂರಿನ ಬಗ್ಗೆ ನನಗೆ ತಿಳಿದಿಲ್ಲ. ನಾನು ಮತ್ತು ನಾಝೀನ್ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ನಿರ್ಧಾರ ಮಾಡಿಯೇ ಮದುವೆಯಾಗಿದ್ದೇವೆ. ಆಕೆಯ ಧರ್ಮವನ್ನು ಬದಲಾಯಿಸುವ ಯಾವುದೇ ಪ್ರಶ್ನೆಯಿಲ್ಲ,' ಎಂದು ತಿಳಿಸಿದ್ದಾರೆ.

ಪ್ರಕರಣ ಬಗ್ಗೆ ಮಾಹಿತಿಗೆ ವಡೋದರಾದ ಜೆ.ಪಿ ರೋಡ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT