ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನೌಜ್‌ ಲೋಕಸಭಾ ಕ್ಷೇತ್ರ: ಅಖಿಲೇಶ್‌ ಯಾದವ್‌ ನಾಮಪತ್ರ ಸಲ್ಲಿಕೆ

Published 25 ಏಪ್ರಿಲ್ 2024, 15:35 IST
Last Updated 25 ಏಪ್ರಿಲ್ 2024, 15:35 IST
ಅಕ್ಷರ ಗಾತ್ರ

ಕನೌಜ್‌: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರು ಉತ್ತರ ಪ್ರದೇಶದ ಕನೌಜ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಗುರುವಾರ ನಾಮಪತ್ರ ಸಲ್ಲಿಸಿದರು.

ರಾಮ್‌ ಗೋಪಾಲ್‌ ಯಾದವ್‌ ಸೇರಿದಂತೆ ಪಕ್ಷದ ಮುಖಂಡರ ಸಮ್ಮುಖದಲ್ಲಿ ಅವರು ನಾಮಪತ್ರ ಸಲ್ಲಿಸಿದರು.

‘ಪಕ್ಷದ ಕಾರ್ಯಕರ್ತರ ಆಗ್ರಹದಂತೆ ಕನೌಜ್‌ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ. ಇಲ್ಲಿನ ಜನರು ಆಶೀರ್ವದಿಸುತ್ತಾರೆಂಬ ವಿಶ್ವಾಸವಿದೆ’ ಎಂದು ನಾಮಪತ್ರ ಸಲ್ಲಿಸಿದ ಬಳಿಕ ಅಖಿಲೇಶ್‌ ತಿಳಿಸಿದರು. ‘ಬಿಜೆಪಿಯ ಋಣಾತ್ಮಕ ರಾಜಕೀಯ ಮತ್ತು ಅದರ ಕಾರ್ಯವೈಖರಿಯನ್ನು ಜನರು ಇಷ್ಟಪಡುವುದಿಲ್ಲ’ ಎಂದೂ ಹೇಳಿದರು.

ಸಮಾಜವಾದಿ ಪಕ್ಷವು ಈ ಕ್ಷೇತ್ರಕ್ಕೆ ಸೋಮವಾರ ತೇಜ್ ಪ್ರತಾಪ್‌ ಯಾದವ್‌ ಅವರ ಹೆಸರನ್ನು ಘೋಷಿಸಿತ್ತು. ಆದರೆ ಬುಧವಾರ ತನ್ನ ನಿರ್ಧಾರ ಬದಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT