ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧುಲೆ ಹತ್ಯೆ ಪ್ರಕರಣ: 23 ಮಂದಿ ಪೊಲೀಸರ ವಶಕ್ಕೆ

ಮಕ್ಕಳ ಕಳ್ಳರೆಂದು ಅನುಮಾನಿಸಿ ನಡೆದಿದ್ದ ಐವರ ಹತ್ಯೆ
Last Updated 2 ಜುಲೈ 2018, 9:58 IST
ಅಕ್ಷರ ಗಾತ್ರ

ಧುಲೆ/ಮಹಾರಾಷ್ಟ್ರ: ಮಕ್ಕಳ ಕಳ್ಳರೆಂದು ಅನುಮಾನಿಸಿ ಭಾನುವಾರ ನಡೆದಿದ್ದ ಐವರ ಹತ್ಯೆ ಸಂಬಂಧ 23 ಮಂದಿಯನ್ನು ಮಹಾರಾಷ್ಟ್ರ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.

ಮೃತರನ್ನು ಸೊಲ್ಲಾಪುರದ ಮಂಗಲ್ವೇದಾ ತೆಹ್ಸಿಲ್‌ನ ಖಾವೆ ಗ್ರಾಮದ ಭರತ್ ಶಂಕರ್ ಬೋಸ್ಲೆ(45), ಸಹೋದರ ದಾದಾರಾವ್ ಬೋಸ್ಲೆ, ರಾಜು ಬೋಸ್ಲೆ ಮತ್ತು ಭರತ್ ಮಾಲ್ವೆ(47) , ಮಾನೆವಾಡಿ ಗ್ರಾಮದ ಅನಗು ಇಂಜೋಲ್ ಎಂದು ಗುರುತಿಸಲಾಗಿದೆ.

ಮೃತದೇಹಗಳನ್ನು ಸ್ವೀಕರಿಸಲು ಹಿಂದೇಟು ಹಾಕಿದ ಸಂಬಂಧಿಕರು ಹತ್ಯೆಗೆ ಕಾರಣರಾದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ

ಈ ಘಟನೆ ನಡೆದು ಒಂದು ದಿನ ಕಳೆದರೂ ಯಾವ ಸರ್ಕಾರಿ ಅಧಿಕಾರಿಗಳು ನಮ್ಮ ಬಳಿ ಬಂದು ಘಟನೆ ಬಗ್ಗೆ ವಿಚಾರಿಸಿಲ್ಲ. ನಮಗೆ ನ್ಯಾಯ ಬೇಕು. ಹಾಗೂ ಮೃತರ ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ಅಲ್ಲದೇ ರಾಯಿನ್‌ಪಾಡಾದ ಸರ್ಪಂಚ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಮೃತ ದಾದಾರಾವ್ ಶಂಕರ್ ಬೋಸ್ಲೆ ಮಗ ಸಂತೋಷ್ ಬೋಸ್ಲೆ ಪಟ್ಟು ಹಿಡಿದಿದ್ದಾರೆ.

ಸಚಿವರ ಭರವಸೆ:
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಗೃಹ ಸಚಿವ ದೀಪಕ್ ಕೇಸರ್‌ಕರ್, ದುಷ್ಕರ್ಮಿಗಳವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಈ ಘಟನೆ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅಂಶಗಳನ್ನು ನಂಬಬೇಡಿ. ಯಾರು ಕಾನೂನನ್ನು ಕೈಗೆತ್ತಿಕ್ಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.

ಧುಲೆಯಲ್ಲೆ ನಡೆದ ಈ ಭೀಕರ ಘಟನೆ ಖಂಡನೀಯವಾದುದು ಎಂದು ಮಹಾರಾಷ್ಟ್ರದ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಚಾವಣ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT