ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

INS ಅಧ್ಯಕ್ಷರಾಗಿ ‘ಮಾತೃಭೂಮಿ’ಯ ಶ್ರೇಯಾಂಸ್ ಕುಮಾರ್ ಆಯ್ಕೆ

ಕೆ.ಎನ್‌.ತಿಲಕ್ ಕುಮಾರ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ
Published : 27 ಸೆಪ್ಟೆಂಬರ್ 2024, 14:40 IST
Last Updated : 27 ಸೆಪ್ಟೆಂಬರ್ 2024, 14:40 IST
ಫಾಲೋ ಮಾಡಿ
Comments

ನವದೆಹಲಿ: ಮಲಯಾಳ ದಿನಪತ್ರಿಕೆ ‘ಮಾತೃಭೂಮಿ’ಯ ಎಂ.ವಿ.ಶ್ರೇಯಾಂಸ್ ಕುಮಾರ್ ಅವರು ಇಂಡಿಯನ್‌ ನ್ಯೂಸ್‌ಪೇಪರ್‌ ಸೊಸೈಟಿಯ (ಐಎನ್‌ಎಸ್‌) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಡೆಪ್ಯುಟಿ ಪ್ರೆಸಿಡೆಂಟ್‌ ಆಗಿ ವಿವೇಕ್‌ ಗುಪ್ತಾ (ಸನ್ಮಾರ್ಗ್‌), ಉಪಾಧ್ಯಕ್ಷರಾಗಿ ಕರಣ್‌ ರಾಜೇಂದ್ರ (ಲೋಕಮತ) ಮತ್ತು ಗೌರವ ಖಜಾಂಚಿಯಾಗಿ ತನ್ಮಯ್‌ ಮಾಹೇಶ್ವರಿ (ಅಮರ್‌ ಉಜಾಲ) ಅವರು ಆಯ್ಕೆಯಾದರು. ವಿಡಿಯೊ ಕಾನ್ಫರೆನ್ಸ್‌ ಮೂಲಕ ಶುಕ್ರವಾರ ನಡೆದ ಸಂಸ್ಥೆಯ 85ನೇ ವಾರ್ಷಿಕ ಸಾಮಾನ್ಯಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಕೆ.ಎನ್‌.ತಿಲಕ್ ಕುಮಾರ್ (ಪ್ರಜಾವಾಣಿ, ಡೆಕ್ಕನ್‌ ಹೆರಾಲ್ಡ್‌ ಸಮೂಹದ ಮಾತೃಸಂಸ್ಥೆಯಾದ ದಿ ಪ್ರಿಂಟರ್ಸ್‌ ಮೈಸೂರು ಪ್ರೈವೇಟ್‌ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ), ಎಸ್‌.ಬಾಲಸುಬ್ರಮಣ್ಯನ್ ಆದಿತ್ಯನ್ (ಡೈಲಿ ತಂತಿ) ಮತ್ತು ವಿವೇಕ್‌ ಗೋಯೆಂಕಾ (ದಿ ಇಂಡಿಯನ್ ಎಕ್ಸ್‌ಪ್ರೆಸ್) ಸೇರಿದಂತೆ 41 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT