ಅನುಪ್ಪುರ್ (ಮಧ್ಯಪ್ರದೇಶ): ನ್ಯಾಯಾಧೀಶರಿಗೆ ಗುಂಪೊಂದು ಕೊಲೆ ಬೆದರಿಕೆ ಹಾಕಿ, ಆಸ್ತಿಗೆ ಹಾನಿ ಮಾಡಿ, ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಮಧ್ಯಪ್ರದೇಶದ ಅನುಪ್ಪುರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
.ಮಧ್ಯಪ್ರದೇಶ | ದಲಿತ ವ್ಯಕ್ತಿಗೆ ಥಳಿಸಿ, ಮೂತ್ರ ಕುಡಿಸಿದ ಆರೋಪ; ಮೂವರ ಸೆರೆ.
ಜಿಲ್ಲಾ ಕೇಂದ್ರದಿಂದ 35 ಕಿ.ಮೀ ದೂರದಲ್ಲಿರುವ ಭಾಲುಮಾಡ ಎಂಬಲ್ಲಿ ಶುಕ್ರವಾರ ಮಧ್ಯರಾತ್ರಿ 12.30ರ ಹೊತ್ತಿಗೆ ಈ ಘಟನೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮತಿ–ಉರ್–ರೆಹಮಾನ್ ತಿಳಿಸಿದ್ದಾರೆ.

ಈ ಬಗ್ಗೆ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಮನ್ದೀಪ್ ಸಿಂಗ್ ಛಾಬ್ರಾ ಭಾಲುಮಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಧಿಕೃತ ನಿವಾಸದಲ್ಲಿ ಮಲಗಿದ್ದಾಗ ಗುಂಪೊಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
.ಮಧ್ಯಪ್ರದೇಶ: ಸಿರಪ್ನಲ್ಲಿ ಅಪಾಯಕಾರಿ ರಾಸಾಯನಿಕ ನಂತರ, ಈಗ ಔಷಧದಲ್ಲಿ ಹುಳು ಪತ್ತೆ.
ಆ ಗುಂಪು ಮನೆಯ ಆಸ್ತಿಗೂ ಹಾನಿ ಮಾಡಿದ್ದು, ಗೇಟ್ನಲ್ಲಿದ್ದ ದೀಪ ಹಾಗೂ ಕಬ್ಬಿಣಗಳನ್ನು ಧ್ವಂಸ ಮಾಡಿದೆ. ಮನೆ ಮೇಲೂ ಕಲ್ಲು ಎಸೆದಿದ್ದಾರೆ. ಮನೆಯಿಂದ ನಾನು ಹೊರಬಂದಾಗ ಗುಂಪು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.

ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ.

ಪೊಲೀಸರು ತನಿಖೆ ಆರಂಭಿಸಿದ್ದು, ಮ್ಯಾಜಿಸ್ಟ್ರೇಟ್ ಇತ್ತೀಚೆಗೆ ನೀಡಿದ ಯಾವುದೇ ತೀರ್ಪು ಅಥವಾ ಬೇಲ್ ನಿರಾಕರಿಸಿದ ಪ್ರಕರಣಗಳನ್ನು ಪರಿಶೀಲಿಸುತ್ತಿದ್ದಾರೆ.
.ಮಧ್ಯಪ್ರದೇಶ: ಕೆಮ್ಮಿನ ಸಿರಪ್ ಸೇವಿಸಿದ ಇಬ್ಬರು ಮಕ್ಕಳು ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.