ಖಾರ್ಗೊನ್: ಮಧ್ಯಪ್ರದೇಶದ ಖಾರ್ಗೊನ್ ಜಿಲ್ಲೆಯ ನರ್ಮದಾ ನದಿ ದಂಡೆಯಲ್ಲಿ ಕಲುಷಿತ ಆಹಾರ ಸೇವನೆಯಿಂದಾಗಿ 200 ಗಿಳಿಗಳು ಮೃತಪಟ್ಟಿವೆ.

ಇಂದೋರ್ನಲ್ಲಿ ಕಲುಷಿತ ನೀರಿನ ಸೇವನೆಯಿಂದ 10 ಮಂದಿ ಮೃತಪಟ್ಟಿದ್ದು, 150ಕ್ಕೂ ಹೆಚ್ಚು ಜನರು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಈ ನಡುವೆ ಗಿಳಿಗಳ ಮಾರಣ ಹೋಮದ ಬಗ್ಗೆ ವರದಿಯಾಗಿದೆ.
.ದೇಶದ ಸ್ವಚ್ಛ ನಗರ ಇಂದೋರ್ ದುರಂತಕ್ಕೆ ಕಲುಷಿತ ನೀರಿನ ಸೇವನೆಯೇ ಕಾರಣ: ವರದಿ.ಇಂದೋರ್ನಲ್ಲಿ ಕಲುಷಿತ ನೀರು ಸೇವನೆ ಪ್ರಕರಣ; ಮೃತರ ಸಂಖ್ಯೆ 10ಕ್ಕೆ ಏರಿಕೆ.
‘ಕಳೆದ ನಾಲ್ಕು ದಿನಗಳಿಂದ ಸೇತುವೆಯೊಂದರ ಬಳಿ ಗಿಳಿಗಳ ಶವ ಪತ್ತೆಯಾಗಿವೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಹಕ್ಕಿ ಜ್ವರ ಪತ್ತೆಯಾಗಿಲ್ಲ’ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

‘ರಕ್ಷಣಾ ಕಾರ್ಯಾಚರಣೆ ವೇಳೆ ಕೆಲ ಗಿಳಿಗಳು ಜೀವಂತವಾಗಿ ಸಿಕ್ಕಿದ್ದವು. ಆದರೆ ವಿಷದ ತೀವ್ರತೆ ಹೆಚ್ಚಿದ್ದರಿಂದ ಅವುಗಳೂ ಮೃತಪಟ್ಟವು’ ಎಂದು ಜಿಲ್ಲಾ ವನ್ಯಜೀವಿ ಅಧಿಕಾರಿ ಟೋನಿ ಶರ್ಮಾ ಅವರು ತಿಳಿಸಿದ್ದಾರೆ.

‘ಗಿಳಿಗಳ ಸಾವಿನಿಂದಾಗಿ ಈ ಪ್ರದೇಶದಲ್ಲಿ ಹಕ್ಕಿ ಜ್ವರದ ಬಗ್ಗೆ ಆತಂಕ ಉಂಟಾಗಿತ್ತು. ಆದರೆ ಮೃತ ಗಿಳಿಗಳಲ್ಲಿ ಹಕ್ಕಿ ಜ್ವರದ ಸೋಂಕು ಕಂಡುಬಂದಿಲ್ಲ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

‘ಕಲುಷಿತ ಆಹಾರ ಸೇವನೆ ಮತ್ತು ಆಹಾರ ಕ್ರಮದಲ್ಲಿನ ವ್ಯತ್ಯಾಸದಿಂದಾಗಿ ಗಿಳಿಗಳು ಮೃತಪಟ್ಟಿವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.