ಪುಣೆ: ಭೀಮಾ ಕೋರೆಗಾಂವ್ ಹೋರಾಟ ವಿಜಯೋತ್ಸವದ 203ನೇ ವರ್ಷದ ನಿಮಿತ್ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರೆ ಕೆಲ ನಾಯಕರು ಯುದ್ಧ ಸ್ಮಾರಕ ‘ಜಯಸ್ತಂಭ’ಕ್ಕೆ ಭೇಟಿ ನೀಡಿ ನಮಿಸಿದರು.

ಪೆರ್ನೆ ಗ್ರಾಮದಲ್ಲಿರುವ ಜಯಸ್ತಂಭ ಸ್ಮಾರಕ ಸ್ಥಳಕ್ಕೆ ಗೃಹಸಚಿವ ಅನಿಲ್ ದೇಶ್‌ಮುಖ್, ಇಂಧನ ಸಚಿವ ಡಾ.ನಿತಿನ್ ರಾವುತ್, ವಂಚಿತ್ ಬಹುಜನ ಅಂಘಡಿ (ವಿಬಿಎ) ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಅವರೂ ಭೇಟಿ ನೀಡಿದ್ದರು.

ಕೊರೊನಾ ಪರಿಸ್ಥಿತಿ ಹಿನ್ನೆಲೆಯಲ್ಲಿ ಜನರು ಸ್ಮಾರಕ ಸ್ಥಳಕ್ಕೆ ಭೇಟಿ ನೀಡಬಾರದು. ಬದಲಾಗಿ ಮನೆಯಲ್ಲಿಯೇ ಉಳಿದು ಹುತಾತ್ಮರಿಗೆ ನಮನ ಸಲ್ಲಿಸಬೇಕು ಎಂದು ಇದೇ ಸಂದರ್ಭದಲ್ಲಿ ಅಜಿತ್ ಪವಾರ್ ಮನವಿ ಮಾಡಿದರು.

ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಮರಾಠಾ ಒಕ್ಕೂಟದ ಪೇಶ್ವೆ ಗುಂಪಿನ ನಡುವೆ 1818ರ ಜನವರಿ 1ರಂದು ಹೋರಾಟ ನಡೆದಿದ್ದು, ವಿಜಯೋತ್ಸವದ ಸ್ಮರಣಾರ್ಥ ಜಯಸ್ತಂಭ ಸ್ಮಾರಕ ಸ್ಥಾಪನೆಯಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಕಾಶ್ ಅಂಬೇಡ್ಕರ್ ಅವರು, ‘ಜನವರಿ 1 ಎಂಬುದು ಪ್ರತಿಯೊಬ್ಬರೂ ಸಾಮಾಜಿಕ ಸಂಕೋಲೆಗಳಿಂದ ಮುಕ್ತರಾಗುವ ದಿನ. ಭೀಮಾ ಕೋರೆಗಾಂವ್ ಹೋರಾಟವು ಪೇಶ್ವೆ ಆಡಳಿತದಲ್ಲಿ ಜಾರಿಯಲ್ಲಿದ್ದ ಅಸ್ಪೃಶ್ಯತೆ ವಿರುದ್ಧ ಹೋರಾಟ ನಡೆಸಿ ಜಯಗಳಿಸಿದ ದಿನವಾಗಿದೆ’ ಎಂದು ಸ್ಮರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.