ಠಾಣೆ: ಮಹಾರಾಷ್ಟ್ರದ ಠಾಣೆಯಲ್ಲಿ ವೇಶ್ಯಾವಾಟಿಕೆ ಜಾಲವೊಂದನ್ನು ಪೊಲೀಸರು ಭೇದಿಸಿದ್ದು, ಒಬ್ಬರನ್ನು ಬಂಧಿಸಿದ್ದಾರೆ.
‘ನಿಖರ ಮಾಹಿತಿ ಮೇರೆಗೆ ಉಲ್ಲಾಸನಗರ ಅಪರಾಧ ವಿಭಾಗದ ಮಾನವ ಕಳ್ಳಸಾಗಣೆ ವಿರೋಧಿ ಘಟಕವು ವಿಠಲವಾಡಿ ಪ್ರದೇಶದ ಅಶೋಲೆ ಗ್ರಾಮದಲ್ಲಿರುವ ವಸತಿಗೃಹವೊಂದರ ಮೇಲೆ ದಾಳಿ ನಡೆಸಿದೆ. ಈ ಸಂಬಂಧ ಲಾಡ್ಜ್ ಮಾಲೀಕನನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ವಕ್ತಾರೆ ಜಯಮಾಲಾ ವಾಸವೇ ತಿಳಿಸಿದ್ದಾರೆ.
‘ಐವರು ಮಹಿಳೆಯರನ್ನು ರಕ್ಷಿಸಲಾಗಿದ್ದು, ಅವರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಲಾಡ್ಜ್ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಅವರು ಹೇಳಿದರು.