ಠಾಣೆ: ಯುವಕರಿಗೆ ಉದ್ಯೋಗ ಅವಕಾಶಕ್ಕೆ ಅಗತ್ಯವಾದ ಸ್ವವಿವರಗಳನ್ನು (ಬಯೊಡೇಟಾ) ಆಕರ್ಷಕವಾಗಿ ಸಿದ್ಧಪಡಿಸುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳಲು ಮಹಾರಾಷ್ಟ್ರದ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ನಿರ್ಧರಿಸಿದೆ.

ಇದರಿಂದ ರಾಜ್ಯದಲ್ಲಿನ ಒಂದು ಲಕ್ಷ ಯುವಕರಿಗೆ ಉದ್ಯೋಗ ಪಡೆಯಲು ಅನುಕೂಲವಾಗಲಿದೆ. ಈ ಯೋಜನೆಯು ಸಚಿವ ಮಂಗಲ ಪ್ರಭಾತ್ ಲೋಧಾ ಅವರ ಕನಸಿನ ಕೂಸು ಎಂದು ಸಚಿವಾಲಯ ತಿಳಿಸಿದೆ.

ಯುವಕರು ಉತ್ತಮವಾದ ಉದ್ಯೋಗ ಅವಕಾಶಗಳನ್ನು ಹೊಂದಿದ್ದರೂ, ಹಲವು ಬಾರಿ ಸ್ವವಿವರ ಸರಿ ಇಲ್ಲದ ಕಾರಣ ಉದ್ಯೋಗ ಪಡೆಯುವಲ್ಲಿ ವಿಫಲರಾಗುತ್ತಾರೆ. ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಯುವಕರಿಗೆ ಡಿಜಿಟಲ್ ಸ್ವವಿವರದ ವ್ಯವಸ್ಥೆ ಮಾಡಲು ಸಚಿವರು ನಿರ್ಧರಿಸಿದರು ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.