ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಮಹಾಕುಂಭ: ವಸಂತ ಪಂಚಮಿ ‘ಅಮೃತ ಸ್ನಾನ’; ಲಕ್ಷಾಂತರ ಭಕ್ತರಿಂದ ಪವಿತ್ರ ಸ್ನಾನ

Published : 3 ಫೆಬ್ರುವರಿ 2025, 2:09 IST
Last Updated : 3 ಫೆಬ್ರುವರಿ 2025, 2:09 IST
ಫಾಲೋ ಮಾಡಿ
Comments
ಬೆಳಗಿನ ಜಾವ 4ಕ್ಕೆ ‘ಅಮೃತ ಸ್ನಾನ’ ಆರಂಭ ಭಕ್ತರ ಮೇಲೆ ಹೆಲಿಕಾಪ್ಟರ್‌ನಿಂದ ಹೂಮಳೆ ನಾಗಾ ಸಾಧುಗಳು, ಸನ್ಯಾಸಿಗಳ ಮೆರವಣಿಗೆ
‘ಸನಾತನ ಧರ್ಮದ ದುರ್ಬಳಕೆ ಸಲ್ಲ’
ವಸಂತ ಪಂಚಮಿ ದಿನ ಅಮೃತ ಸ್ನಾನಕ್ಕಾಗಿ ಸಂಗಮದಲ್ಲಿ ನೆರೆದಿದ್ದ ಸಂತರು ಸನಾತನ ಧರ್ಮವನ್ನು ದುರುಪಯೋಗಪಡಿಸಿಕೊಳ್ಳದಂತೆ ಮತ್ತು ರಾಜಕೀಯ ಲಾಭಕ್ಕಾಗಿ ವದಂತಿಗಳನ್ನು ಹರಡದಂತೆ ರಾಜಕೀಯ ಮುಖಂಡರಿಗೆ ಎಚ್ಚರಿಕೆ ನೀಡಿದರು. ಪಂಚ ನಿರ್ವಾಣಿ ಅಖಾಡದ ಮಹಾಂತ ಸಂತೋಷ್ ದಾಸ್‌ ಬಾಬಾ ಮಹಾರಾಜ್‌ ಅವರು ರಾಜಕೀಯ ಮುಖಂಡರು ಅದರಲ್ಲೂ ಮುಖ್ಯವಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ವಿರುದ್ಧ ಹರಿಹಾಯ್ದಿದ್ದಾರೆ. ‘ನೀವು ಯಾವತ್ತೂ ಸನಾತನ ಧರ್ಮವನ್ನು ಅನುಸರಿಸಿಲ್ಲ ಅಥವಾ ಗೌರವಿಸಿಲ್ಲ. ಆದ್ದರಿಂದ ಅದರಿಂದ ಲಾಭ ಪಡೆಯಲು ಪ್ರಯತ್ನಿಸಬೇಡಿ’ ಎಂದು ಅಖಿಲೇಶ್‌ಗೆ ಎಚ್ಚರಿಸಿದ್ದಾರೆ. ಹಿಂದಿನ ಘಟನೆಗಳನ್ನು ಉಲ್ಲೇಖಿಸಿದ ಅವರು ‘ನಿಮ್ಮ ಪಕ್ಷವು ಅಧಿಕಾರದಲ್ಲಿದ್ದಾಗ ಸನಾತನ ಧರ್ಮವನ್ನು ಯಾವ ರೀತಿ ಗುರಿಯಾಗಿಸಲಾಗಿತ್ತು ಎಂಬುದನ್ನು ನಾವು ನೋಡಿದ್ದೇವೆ. ರಾಜಕೀಯ ಲಾಭಕ್ಕಾಗಿ ವದಂತಿಗಳನ್ನು ಹರಡಬೇಡಿ. ನಾವು ಸನಾತನಿಗಳು ನಿಮ್ಮಂಥವರನ್ನು ಬೇರು ಸಮೇತ ಕಿತ್ತೊಗೆಯುತ್ತೇವೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT