ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾದೇವ ಆ್ಯಪ್‌ ಹಗರಣ: ಪುಣೆಯಲ್ಲಿ ಐವರ ಬಂಧನ

Published 4 ಜುಲೈ 2024, 16:19 IST
Last Updated 4 ಜುಲೈ 2024, 16:19 IST
ಅಕ್ಷರ ಗಾತ್ರ

ರಾಯಪುರ(ಛತ್ತೀಸ್‌ಗಢ): ಮಹಾದೇವ ಬೆಟ್ಟಿಂಗ್‌ ಆ್ಯಪ್‌ ಹಗರಣ ಕುರಿತ ತನಿಖೆಗೆ ಸಂಬಂಧಿಸಿ, ಮಹಾರಾಷ್ಟ್ರದ ಪುಣೆಯಲ್ಲಿ ಐವರನ್ನು ಬಂಧಿಸಿ, ರಾಜ್ಯದ ರಾಜಧಾನಿ ರಾಯಪುರಕ್ಕೆ ಕರೆತರಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

‘ಪುಣೆ ಹೊರವಲಯದಲ್ಲಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರ ಪೈಕಿ ಒಬ್ಬಾತ ಪುಣೆ ನಿವಾಸಿಯಾಗಿದ್ದು, ಉಳಿದವರು ಛತ್ತೀಸ್‌ಗಢದ ಭಿಲಾಯ್ ನಗರದವರು. ಅವರು ‘ಮಹಾದೇವ–ರೆಡ್ಡಿ ಅಣ್ಣ 15 ಆ್ಯಪ್‌’ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಬಂಧಿತರಿಂದ 56 ಎಟಿಎಂ ಕಾರ್ಡುಗಳು, 47 ಮೊಬೈಲ್ ಫೋನ್‌ಗಳು, 35 ಚೆಕ್‌ಬುಕ್‌ಗಳು, 20 ಬ್ಯಾಂಕ್‌ ಪಾಸ್‌ಬುಕ್‌, 7 ಆನ್‌ಲೈನ್‌ ಬೆಟ್ಟಿಂಗ್‌ ಕಿಟ್‌ಗಳು, 6 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದೂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT