ಭಾರಿ ಮಳೆಯಿಂದಾಗಿ 63 ಹಳ್ಳಿಗಳಿಗೆ ಹಾನಿಯಾಗಿದ್ದು, ಕೆಲವು ಮನೆಗಳು ಕುಸಿದಿವೆ. ಅಲ್ಲದೆ 18 ಹಳ್ಳಿಗಳ 74 ರೈತರಿಗೆ ಸೇರಿದ 45.20 ಹೆಕ್ಟೇರ್ ಪ್ರದೇಶದ ಬೆಳೆ ನಷ್ಟವಾಗಿದೆ. ಮಳೆ ಸಂಬಂಧಿತ ಅವಘಡಗಳಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದು, 88 ಪ್ರಾಣಿಗಳು ಸಾವಿಗೀಡಾಗಿವೆ ಎಂದು ಕಂದಾಯ ಅಧಿಕಾರಿಗಳ ಪ್ರಾಥಮಿಕ ವರದಿ ತಿಳಿಸಿದೆ.
ನಾಂದೇಡ್‌ದಲ್ಲಿರುವ ವಿಷ್ಣುಪುರಿ ಜಲಾಶಯದ ಗೇಟ್ ಅನ್ನು ಇಂದು (ಸೋಮವಾರ) ಬೆಳಿಗ್ಗೆ ತೆರೆಯಲಾಗಿದೆ. ಜಯಕ್ವಾಡಿ ಅಣೆಕಟ್ಟಿನ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ಗೋದಾವರಿ ನದಿ ತಪ್ಪಲಿನಲ್ಲಿರುವ ಹಳ್ಳಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಾರಿ ಮಳೆಯಿಂದಾಗಿ ಹಿಂಗೋಲಿ ಮತ್ತು ಸೆಂಗಾಂವ್ ನಡುವಿನ ಸಂಪರ್ಕ ಸೇತುವೆ ಮುಳುಗಡೆಯಾಗಿದೆ. ವಿಷ್ಣುಪುರಿ, ಜಯಕ್ವಾಡಿ ಮತ್ತು ಸಿದ್ದೇಶ್ವರ ಅಣ್ಣೆಕಟ್ಟುಗಳಿಂದ ನೀರು ಹೊರಬಿಡುವ ಕಾರ್ಯ ಪ್ರಾರಂಭಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.