ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 42,015 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 3,998 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಇದರೊಂದಿಗೆ ಸೋಂಕಿತರ ಸಂಖ್ಯೆ 3,12,16,337 ಕ್ಕೆ ಏರಿಕೆಯಾಗಿದೆ. ಆ ಪೈಕಿ 4,18,480 ಮಂದಿ ಸಾವಿಗೀಡಾಗಿದ್ದಾರೆ. ಇದುವರೆಗೆ 3,03,90,687 ಮಂದಿ ಗುಣಮುಖರಾಗಿದ್ದು, ಸದ್ಯ ದೇಶದಲ್ಲಿ 4,07,170 ಸಕ್ರಿಯ ಪ್ರಕರಣಗಳಿವೆ.
ಕೇರಳದಲ್ಲಿ 1,26,894, ಮಹಾರಾಷ್ಟ್ರದಲ್ಲಿ 97,932, ತಮಿಳುನಾಡಿನಲ್ಲಿ 26,717, ಕರ್ನಾಟಕದಲ್ಲಿ 26,279, ಆಂಧ್ರಪ್ರದೇಶದಲ್ಲಿ 23,843 ಸಕ್ರಿಯ ಪ್ರಕರಣಗಳಿವೆ.
ದೇಶದಾದ್ಯಂತ ಇರುವರೆಗೆ 41,54,72,455 ಡೋಸ್ ಕೋವಿಡ್ ಲಸಿಕೆಯನ್ನು ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.