ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಸರ್ಕಾರದಿಂದ ಅಂತರರಾಷ್ಟ್ರೀಯ ಗಣೇಶ ಉತ್ಸವ

Published 17 ಸೆಪ್ಟೆಂಬರ್ 2023, 13:42 IST
Last Updated 17 ಸೆಪ್ಟೆಂಬರ್ 2023, 13:42 IST
ಅಕ್ಷರ ಗಾತ್ರ

ಮುಂಬೈ: ದೇಶದ ವಿಶಿಷ್ಟ ಸಂಸ್ಕೃತಿ ಮತ್ತು ಪರಂಪರೆಯನ್ನು ಜಗದಗಲ ಪರಿಚಯಿಸುವ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರ ಈ ಬಾರಿ ಅಂತರರಾಷ್ಟ್ರೀಯ ಗಣೇಶ ಹಬ್ಬ ಆಯೋಜಿಸಲು ನಿರ್ಧರಿಸಿದೆ.

ವಾಣಿಜ್ಯ ನಗರಿ ಮುಂಬೈ ಮತ್ತು ಪುಣೆ, ರತ್ನಗಿರಿ, ಪಾಲ್ಘರ್‌ ಜಿಲ್ಲೆಗಳಲ್ಲಿ ಅಂತರರಾಷ್ಟ್ರೀಯ ಉತ್ಸವವನ್ನು ಆಯೋಜಿಸಿ ಜಾಗತಿಕ ಸಾಂಸ್ಕೃತಿಕ ಉತ್ಸವಕ್ಕೆ ವಿನೂತನ ಮೆರುಗು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಪ್ರಸಕ್ತ ವರ್ಷ ಸೆಪ್ಟೆಂಬರ್‌ 19ರಿಂದ28ರ ವರೆಗೆ ಹತ್ತು ದಿನಗಳ ಕಾಲ ಗಣೇಶೋತ್ಸವ ಆಚರಿಸಲಾಗುತ್ತದೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಪ್ರವಾಸೋಧ್ಯಮ ಸಚಿವ ಗಿರೀಶ್‌ ಮಹಾಜನ್‌, ‘ಅಂತರರಾಷ್ಟ್ರೀಯ ಗಣೇಶ ಹಬ್ಬ ಕೇವಲ ತೋರಿಕೆಯ ವೈಭವ ಅಲ್ಲ. ಇದು ಮಹಾರಾಷ್ಟ್ರದ ಜೀವಾಳ, ಇಲ್ಲಿನ ಜನರ ನಾಡಿಮಿಡಿತ ಮತ್ತು ಆತ್ಮನಿರ್ಭರ ಗುರಿ ಹೊಂದಿರುವ ದೇಶದ ಅದಮ್ಯ ಚೈತನ್ಯದ ಸಂಕೇತ. ಈ ಹಬ್ಬವು ಸರಿಸಾಟಿ ಇಲ್ಲದ ನಮ್ಮ ಕಲೆ, ಸಂಸ್ಕೃತಿ ಮತ್ತು ವೈಶಿಷ್ಟತೆಯನ್ನು ಜಾಗತಿಕ ಮಟ್ಟದಲ್ಲಿ ಸಾರುತ್ತದೆ ಎಂದು ಭಾವಿಸುತ್ತೇವೆ’ ಎಂದು ಹೇಳಿದರು.

ಉತ್ಸವ ಪ್ರಯುಕ್ತ ಗೇಟ್‌ ವೇ ಆಫ್‌ ಇಂಡಿಯಾದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಇಲ್ಲಿ ಮರಳು ಕಲೆ, ಮೊಸಾಯಿಕ್‌ ಕಲೆಗಳ ಸೌಂದರ್ಯವನ್ನು ಅನಾವರಣ ಮಾಡಲಾಗುತ್ತದೆ. ಮಹಾರಾಷ್ಟ್ರದ ಮಣ್ಣಿನ ಕತೆಗಳನ್ನು ಸಾರುವ ನೃತ್ಯ, ವಸ್ತು ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT