ಕೋಲ್ಕತ್ತ: ಸರಣಿ ರೈಲು ಅಪಘಾತಗಳ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದು ಕೇಂದ್ರ ಸರ್ಕಾರದ ಆಡಳಿತದ ವೈಫಲ್ಯವಾಗಿದೆ ಎಂದು ಮಂಗಳವಾರ ಆರೋಪಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಪ್ರತಿ ನಿತ್ಯ ರೈಲು ಅಪಘಾತಗಳು ವರದಿಯಾಗುತ್ತಿರುವುದು ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಕಿಡಿಕಾರಿದ್ದಾರೆ.
.ವಯನಾಡು ಭೂಕುಸಿತದಲ್ಲಿ 5 ಮಂದಿ ಸಾವು: ನೂರಾರು ಮಂದಿ ಸಿಲುಕಿರುವ ಶಂಕೆ .ಭೂಕುಸಿತ | ನೂರಾರು ಮಂದಿ ಸಿಲುಕಿರುವ ಶಂಕೆ: ಕೇರಳ ಸಿಎಂ ಪಿಣರಾಯಿ ವಿಜಯನ್.
‘ಮತ್ತೊಂದು ರೈಲು ದುರಂತ!, ಜಾರ್ಖಂಡ್ನ ಸೆರೈಕೆಲಾ– ಖಾರ್ಸಾ ವಾನ್ ಜಿಲ್ಲೆಯಲ್ಲಿ ಇಂದು (ಮಂಗಳವಾರ) ಮುಂಬೈ–ಹೌರಾ ರೈಲು ಅಪಘಾತಗೀಡಾಗಿದೆ‘ ಎಂದು ಪೋಸ್ಟ್ನಲ್ಲಿ ತಿಳಿಸಿದ್ದಾರೆ.

ರೈಲು ಅಪಘಾತಗಳ ವಿಚಾರವಾಗಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿರುವ ಮಮತಾ, ಸರಣಿ ರೈಲು ಅಪಘಾತಗಳು ಮುಂದುವರಿದಿವೆ. ಇದು ಆಡಳಿತವೇ?, ಇನ್ನೆಷ್ಟು ದಿನ ಅಂತಹ ಬೇಜವಾಬ್ದಾರಿತನದ ಆಡಳಿತ ಎಂದು ಮಮತಾ ಕೇಂದ್ರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ
.ಜಾರ್ಖಂಡ್ | ಹಳಿ ತಪ್ಪಿದ ಮುಂಬೈ–ಹೌರಾ ರೈಲು: 6 ಮಂದಿಗೆ ಗಾಯ.ಕ್ಷೇಮ ಕುಶಲ: ನಿಮ್ಮ ಮಗುವನ್ನು ಸಂತೈಸಿರಿ....
ಆಗ್ನೇಯ ರೈಲ್ವೆಯ ಚಕ್ರಧರಪುರ ವಿಭಾಗದ ಜಮ್ಶೆಡ್ಪುರದಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಬರಬಂಬೂ ಬಳಿ ಮುಂಜಾನೆ 3.45 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ.

ಮುಂಬೈ–ಹೌರಾ ರೈಲಿನ 18 ಬೋಗಿಗಳು ಹಳಿತಪ್ಪಿದ ಪರಿಣಾಮ ಇಬ್ಬರು ಮೃತಪಟ್ಟಿದ್ದು 20 ಮಂದಿ ಗಾಯಗೊಂಡಿದ್ದಾರೆ. ಆಗ್ನೇಯ ರೈಲ್ವೆಯ ಚಕ್ರಧರಪುರ ವಿಭಾಗದ ಜಮ್ಶೆಡ್ಪುರದಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಬರಬಂಬೂ ಬಳಿ ಮುಂಜಾನೆ 3.45 ಗಂಟೆಗೆ ಈ ಅವಘಡ ಸಂಭವಿಸಿದೆ. ಗಾಯಗೊಂಡವರನ್ನು ಚಕ್ರಧರಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ’ ಎಂದು ಆಗ್ನೇಯ ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.