ಚಾಯ್‌ಬಾಸ: ನೆರೆಮನೆಯವ ವ್ಯಕ್ತಿಯನ್ನು ಕೊಲೆ ಮಾಡಿದವನಿಗೆ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭುಮ್‌ನ ನ್ಯಾಯಾಲಯವೊಂದು ಗಲ್ಲು ಶಿಕ್ಷೆ ವಿಧಿಸಿದೆ.
ಗೋಲಿಕೆರಾ ಪೊಲೀಸ್ ಠಾಣೆ ವ್ಯಾಪ್ತಿಯ ಅರಾಹಸ ಗ್ರಾಮದ ಶಲುಕ ಹೆಮ್‌ಬ್ರಮ್ ಎಂಬಾತನೆ ಗಲ್ಲು ಶಿಕ್ಷೆಗೆ ಗುರಿಯಾದ ವ್ಯಕ್ತಿ. ನೆರೆಮನೆಯ ರಮ್ದಾನ್ ಹೆಮ್‌ಬ್ರಮ್ ಎಂಬವರನ್ನು ಮಾರಕ ಆಯುಧಗಳಿಂದ ಕೊಲೆ ಮಾಡಿದ ಆರೋಪದಲ್ಲಿ ಐಪಿಸಿ ಸೆಕ್ಷನ್ 302ರಡಿ 2019ರಲ್ಲಿ ದೂರು ದಾಖಲಾಗಿತ್ತು. ಆರೋಪ ಸಾಬೀತಾಗಿದ್ದು, ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಗಲ್ಲು ಶಿಕ್ಷೆ ವಿಧಿಸಿದ್ದಾರೆ.
ಜೊತೆಗೆ ₹1 ಲಕ್ಷ ದಂಡವನ್ನೂ ವಿಧಿಸಲಾಗಿದೆ.
ತನ್ನ ಪುತ್ರನೊಂದಿಗೆ ಇದ್ದಾಗ ರಮ್ದಾನ್ ಮನೆಗೆ ಶಲುಕಾ ಬಂದಿದ್ದ. ಈ ವೇಳೆ ಯಾವುದೋ ಒಂದು ವಿಚಾರ ಸಂಬಂಧ ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ಶುಕ್ಲಾ ಮಾರಕ ಆಯುಧದಿಂದ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.