ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರ ಉಪಚುನಾವಣೆ: ಬಿಜೆಪಿ ಎರಡು, ಕಾಂಗ್ರೆಸ್‌ ಒಂದು ಕ್ಷೇತ್ರದಲ್ಲಿ ಮುನ್ನಡೆ

Last Updated 10 ನವೆಂಬರ್ 2020, 7:08 IST
ಅಕ್ಷರ ಗಾತ್ರ

ಇಂಪಾಲ್‌: ಮಣಿಪುರದಲ್ಲಿ ಮತ ಎಣಿಕೆ ಆರಂಭವಾಗಿದ್ದು, ಪ್ರಮುಖ ಪಕ್ಷಗಳ ನಡುವೆ ಪೈಪೋಟಿ ಬಲು ಜೋರಾಗಿದೆ. ಆರಂಭಿಕ ಮತ ಎಣಿಕೆಯ ಅಂಕಿಅಂಶಗಳ ಪ್ರಕಾರ, ಆಡಳಿತಾರೂಢ ಬಿಜೆಪಿ ಎರಡು ಸ್ಥಾನ, ಕಾಂಗ್ರೆಸ್‌ ಮತ್ತು ಸ್ವತಂತ್ರ ಅಭ್ಯರ್ಥಿಗಳು ತಲಾ ಒಂದು ಕ್ಷೇತ್ರದಲ್ಲಿ ಮುಂದಿದ್ದಾರೆ.

ವಂಗೋಯಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಓನಮ್‌ ಲುಖೋಯ್‌ ಸಿಂಗ್‌ ಅವರು ನ್ಯಾಷನಲ್‌ ಪೀಪಲ್ಸ್‌ ಪಕ್ಷದ ಅಭ್ಯರ್ಥಿ ಖುರೈಜಮ್‌ ಲೋಕೆನ್‌ ಸಿಂಗ್‌ ಅವರಿಗಿಂತ 268 ಮತಗಳಿಂದ ಮುಂದಿದ್ದಾರೆ ಎಂದು ಆರಂಭಿಕ ಮತ ಎಣಿಕೆಯಲ್ಲಿ ತಿಳಿದು ಬಂದಿದೆ.

ಸೈತು ಕ್ಷೇತ್ರದಲ್ಲಿ ಬಿಜೆಪಿಯ ಗಮ್‌ಥಾಂಗ್ ಹಾಕಿಪ್ ಅವರು ಕಾಂಗ್ರೆಸ್‌ ಅಭ್ಯರ್ಥಿ ಲ್ಯಾಮ್‌ಟಿಂಥಾಂಗ್ ಹಾಕಿಪ್‌ಗಿಂತ 1,827 ಮತಗಳಿಂದ ಮುಂದಿದ್ದಾರೆ ಎಂದು ಇಸಿಐ ವೈಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ವಾಂಗ್ಜಿಂಗ್ ಟೆಂಥಾ ಕ್ಷೇತ್ರದಲ್ಲಿಕಾಂಗ್ರೆಸ್ ಅಭ್ಯರ್ಥಿ ಮೊಯಿರಾಂಗ್‌ಥೆಮ್ ಹೇಮಂತ ಸಿಂಗ್ ಅವರು ತಮ್ಮ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿಯ ಪಾವೊಮ್ ಬ್ರೋಜೆನ್ ಸಿಂಗ್‌ಗಿಂತ 675 ಮತಗಳಿಂದ ಮುಂದಿದ್ದಾರೆ.

ಲಿಯಾಂಗ್‌ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಗಳ ನಡುವೆ ಪೈಪೋಟಿ ಜೋರಾಗಿದ್ದು, ಸ್ವತಂತ್ರ ಅಭ್ಯರ್ಥಿ ವೈ ಅಂತಾಸ್‌ ಖಾನ್‌, ಪ್ರತಿಸ್ಪರ್ಧಿ ಮೊಹಮ್ಮದ್‌ ಅಬ್ದುಲ್‌ ನಸೀರ್‌ ಅವರಿಂದ 1,992 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT