ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಣಿಪುರ: ಉಗ್ರರ ಮೂರು ಬಂಕರ್‌ಗಳನ್ನು ನಾಶಪಡಿಸಿದ ಸೇನಾಪಡೆಗಳು

Published : 7 ಸೆಪ್ಟೆಂಬರ್ 2024, 5:47 IST
Last Updated : 7 ಸೆಪ್ಟೆಂಬರ್ 2024, 5:47 IST
ಫಾಲೋ ಮಾಡಿ
Comments

ಇಂಫಾಲ: ಬಿಷ್ಣುಪುರ ಜಿಲ್ಲೆಯಲ್ಲಿ ಉಗ್ರರು ನಡೆಸಿದ ರಾಕೆಟ್ ದಾಳಿಗೆ ಭದ್ರತಾ ಪಡೆಗಳು ತಿರುಗೇಟು ನೀಡಿದ್ದು, ಚುರ್‌ಚಂದಪುರ ಜಿಲ್ಲೆಯಲ್ಲಿ ಉಗ್ರರಿಗೆ ಸೇರಿದ 3 ಬಂಕರ್‌ಗಳನ್ನು ಸೇನಾಪಡೆಗಳು ಧ್ವಂಸ ಮಾಡಿವೆ.

ಬಿಷ್ಣುಪುರ ಜಿಲ್ಲೆಯಲ್ಲಿ ಉಗ್ರರ ದಾಳಿಗೆ ಶುಕ್ರವಾರ ಒಬ್ಬರು ಸಾವಿಗೀಡಾಗಿದ್ದರು. ಆರು ಮಂದಿ ಗಾಯಗೊಂಡಿದ್ದರು.

ಚುರ್‌ಚಂದಾಪುರ ಜಿಲ್ಲೆ ಮುವಾಸ್ಲಾಂಗ್‌ ಹಾಗೂ ಲೈಕಾ ಮುವಾಸ್ಲಾವು ಗ್ರಾಮಗಳಲ್ಲಿ ಸೇನಾಪಡೆಗಳ ಕಾರ್ಯಾಚರಣೆ ಪ್ರಗತಿಯಲ್ಲಿವೆ.

ಉಗ್ರರು ದಾಳಿ ನಡೆಸಿದ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಸೇನಾಪಡೆಗಳನ್ನು ನಿಯೋಜಿಸಲಾಗಿದೆ. ಕೂಂಬಿಂಗ್ ಕಾರ್ಯಾಚರಣೆ ಪ್ರಗತಿಯಲ್ಲಿದೆ.

ಮುವಾಸ್ಲಾಂಗ್‌ ಗ್ರಾಮದಲ್ಲಿ 2 ಹಾಗೂ ಲೈಕಾ ಮುವಾಸ್ಲಾವು ಗ್ರಾಮದಲ್ಲಿ ಉಗ್ರರ ಒಂದು ಬಂಕರ್‌ ಅನ್ನು ನಾಶಪಡಿಸಲಾಗಿದೆ.

ಬಿಷ್ಣುಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ತಂಡ ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ‍ಪ್ರತ್ಯುತ್ತರ ನೀಡಿ ಅವರನ್ನು ಹಿಮ್ಮೆಟ್ಟಿಸಲಾಗಿದೆ. ಸ್ಥಳದಲ್ಲಿ ವೈಮಾನಿಕ ಕಣ್ಗಾವಲಿಗೆ ಸೇನಾ ಹೆಲಿಕಾಪ್ಟರ್ ನಿಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT