ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಯಾಣ: ಸಿಎಂ ಆಗಿ ಖಟ್ಟರ್‌, ಡಿಸಿಎಂ ಆಗಿ ದುಷ್ಯಂತ್‌ ಚೌಟಾಲ ಪ್ರಮಾಣವಚನ ಸ್ವೀಕಾರ

Last Updated 27 ಅಕ್ಟೋಬರ್ 2019, 9:55 IST
ಅಕ್ಷರ ಗಾತ್ರ

ಚಂಡೀಗಡ: ಹರಿಯಾಣ ಸರ್ಕಾರದ ಮುಖ್ಯಮಂತ್ರಿಯಾಗಿ ಮನೋಹರ್‌ ಲಾಲ್‌ ಖಟ್ಟರ್‌ ಅವರು ಭಾನುವಾರ ಪ್ರಮಾಣ ವಚನ ಪಡೆದರು. ಅವರೊಂದಿಗೆದೋಸ್ತಿ ಪಕ್ಷವಾದ ಜೆಜೆಪಿ ಮುಖ್ಯಸ್ಥ ದುಷ್ಯಂತ್‌ ಚೌಟಾಲ ಅವರು ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

ಮನೋಹರ್‌ ಲಾಲ್‌ ಖಟ್ಟರ್‌ ಅವರು ಹರಿಯಾಣದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾದರು. ಅವರು ಈ ಹಿಂದಿನ ಬಿಜೆಪಿ ಸರ್ಕಾರದ ಸಿಎಂ ಆಗಿದ್ದರು. ಸದ್ಯ ಬಿಜೆಪಿ ಮತ್ತು ಜೆಜೆಪಿ ಮೈತ್ರಿ ಸರ್ಕಾರದಲ್ಲಿಯೂ ಅವರೇ ಸಿಎಂ ಆಗಿದ್ದಾರೆ.

ರಾಜ್ಯಪಾಲ ಸತ್ಯದೇವ್ ನಾರಾಯಣ್‌ಆರ್ಯ ಅವರು ಇಬ್ಬರಿಗೂ ಪ್ರತಿಜ್ಙಾವಿಧಿ ಬೋಧಿಸಿದರು.

Ajay Chautala, father of Haryana Dy CM Dushyant Chautala: What can be a better occasion for a father, than this? Congress can say anything they want to but this govt will go on for 5 years & work for the development of Haryana. There could not have been a better Diwali than this

ದುಷ್ಯಂತ್‌ ಚೌಟಾಲಾ ಅವರು ಉಪ ಮುಖ್ಯಮಂತ್ರಿಯಾದ ಕುರಿತು ಮಾತನಾಡಿರುವ ಅವರ ತಂದೆ ಅಜಯ್‌ ಚೌಟಾಲಾ, ‘ ಒಬ್ಬ ತಂದೆಗೆ ಖುಷಿ ಕೊಡುವಂಥ ಸನ್ನಿವೇಶ ಇದಕ್ಕಿಂತಲೂ ಮಿಗಿಲಾದದ್ದು ಯಾವುದಾದರೂ ಇದೆಯೇ? ಇದಕ್ಕಿಂತಲೂ ಹೆಚ್ಚು ಸಂತೋಷ ಕೊಡುವ ದೀಪಾವಳಿ ನನಗೆ ಇನ್ನೊಂದಿಲ್ಲ. ಈ ಸರ್ಕಾರ ಐದು ವರ್ಷ ಸದೃಢವಾಗಿ ನಡೆಯುತ್ತದೆ. ಹರಿಯಾಣದ ಅಭಿವೃದ್ಧಿಗೆ ದುಡಿಯಲಿದೆ,’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT