ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಹೈದರಾಬಾದ್‌ನ ಕಟ್ಟಡದಲ್ಲಿ ಅಗ್ನಿ ಅವಘಡ: ಒಂದೇ ಕುಟುಂಬದ 17 ಮಂದಿ ಸಾವು

Published : 18 ಮೇ 2025, 6:46 IST
Last Updated : 18 ಮೇ 2025, 19:21 IST
ಫಾಲೋ ಮಾಡಿ
Comments
ಪರಿಹಾರ ಘೋಷಣೆ
ಘಟನೆ ಕುರಿತು ಪ್ರತಿಕ್ರಿಯಿಸಿದರುವ ಪ್ರಧಾನಿ ನರೇಂದ್ರ ಮೋದಿ, ಮೃತರ ಕುಟುಂಬಕ್ಕೆ ₹2 ಲಕ್ಷ ಮತ್ತು ಗಾಯಾಳುಗಳಿಗೆ ₹50 ಸಾವಿರ ಪರಿಹಾರ ಘೋಷಣೆ ಮಾಡಿದ್ದಾರೆ. ಅಂತೆಯೇ ರಾಜ್ಯ ಸರ್ಕಾರ ಕೂಡ ಪರಿಹಾರ ಘೋಷಿಸಿದ್ದು, ಮೃತರ ಕುಟುಂಬಕ್ಕೆ ₹5 ಲಕ್ಷ ನೀಡುವುದಾಗಿ ಹೇಳಿದೆ.
ಆಂಬುಲೆನ್ಸ್‌ ಒಳಗೆ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರ ಚಿತ್ರವನ್ನು ಅಂಟಿಸಲಾಗಿದೆ. ಆದರೆ, ರೋಗಿಗಳಿಗೆ ಅಗತ್ಯವಾಗಿ ಬೇಕಿರುವ ಆಮ್ಲಜನಕ ಮಾಸ್ಕ್‌ ಮಾತ್ರ ಕಾಣೆಯಾಗಿತ್ತು. ಇದು ಇದ್ದಿದ್ದರೆ ಪುಟ್ಟ ಹುಡುಗಿಯೊಬ್ಬಳನ್ನು ಉಳಿಸಿಕೊಳ್ಳಬಹುದಿತ್ತು.
–ಮೃತರ ಕುಟುಂಬಸ್ಥರು, (ಕಾಂಗ್ರೆಸ್‌ ಸಂಸದ ಅನಿಲ್‌ ಕುಮಾರ್ ಯಾದವ್‌ ಅವರು ಘಟನಾ ಸ್ಥಳಕ್ಕೆ ಬಂದ ವೇಳೆ ಕುಟುಂಬಸ್ಥರು ಆಕ್ರೋಶ ಹೊರಹಾಕಿದರು)
ಬೆಂಕಿ ಹೊತ್ತಿಕೊಂಡಾಗ ಅಗ್ನಿ ಶಾಮಕ ದಳದವರಿಗೆ ಕರೆ ಮಾಡಿದರೂ ಸಿಬ್ಬಂದಿಯು ತಡೆವಾಗಿ ಬಂದಿದ್ದಾರೆ ಎನ್ನುವ ಮಾಹಿತಿ ಇದೆ
–ಜಿ. ಕಿಶನ್‌ ರೆಡ್ಡಿ, ಕೇಂದ್ರ ಸಚಿವ
ಮಾಹಿತಿ ಬಂದ ತಕ್ಷಣದಲ್ಲಿಯೇ ಅಗ್ನಿ ಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ, ಕ್ಷಿಪ್ರವಾಗಿ ಕಾರ್ಯನಿರ್ವಹಿಸಿದ್ದಾರೆ. ಇಲ್ಲವಾಗಿದ್ದರೆ ಘಟನೆಯಲ್ಲಿ ಇನ್ನಷ್ಟು ಜನರು ಜೀವ ಕಳೆದುಕೊಳ್ಳಬೇಕಿತ್ತು. ಇನ್ನಷ್ಟು ಆಸ್ತಿಗೆ ಹಾನಿಯಾಗುತ್ತಿತ್ತು
–ಭತ್ತಿ ವಿಕ್ರಮಾರ್ಕ ಮಲ್ಲು, ತೆಲಂಗಾಣ ಉಪಮುಖ್ಯಮಂತ್ರಿ
ಘಟನೆ ಬಗ್ಗೆ ತನಿಖೆ ನಡೆಸಲಾಗುವುದು. ಅಗ್ನಿ ಅವಘಡಕ್ಕೆ ಪಿತೂರಿ ನಡೆಸಲಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ
–ಪೊನ್ನಂ ಪ್ರಭಾಕರ್‌, ಸಾರಿಗೆ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT