ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಹಾರ: ಇಬ್ಬರು ಮಾವೊವಾದಿಗಳ ಬಂಧನ

Published 10 ಆಗಸ್ಟ್ 2023, 14:06 IST
Last Updated 10 ಆಗಸ್ಟ್ 2023, 14:06 IST
ಅಕ್ಷರ ಗಾತ್ರ

ಗಯಾ: ಮಾವೊವಾದಿ ನಾಯಕ ಪ್ರಮೋದ್ ಮಿಶ್ರಾ ಮತ್ತು ಆತನ ಸಹಚರ ಅನಿಲ್‌ ಯಾದವ್‌ ಎಂಬಾತನನ್ನು ಬಿಹಾರ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಪ್ರಮೋದ್ ಮಿಶ್ರಾನ ತಲೆಗೆ ಸರ್ಕಾರ ₹1 ಕೋಟಿ ಬಹುಮಾನ ಘೋಷಿಸಿತ್ತು ಎಂದು ಮೂಲಗಳು ತಿಳಿಸಿವೆ.

ಪ್ರಮೋದ್‌ ಮತ್ತು ಅನಿಲ್‌ ಗಯಾ ಜಿಲ್ಲೆಯ ಟೆಕ್ರಿ ಪ್ರದೇಶದಲ್ಲಿ ಅಡಗಿರುವ ಮಾಹಿತಿ ಅರಿತು ಸ್ಥಳೀಯ ಪೊಲೀಸರು ಮತ್ತು ಸಿಆರ್‌ಪಿಎಫ್‌ನ ಕೋಬ್ರಾ ಬೆಟಾಲಿಯನ್‌ನ ಯೋಧರು ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಿದ್ದಾರೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಆಶಿಶ್‌ ಭಾರತಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT